Home ಟಾಪ್ ಸುದ್ದಿಗಳು ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ರಾಜ್ಯಕ್ಕೆ ಅವಮಾನ: ಬಿ.ಆರ್. ಜಯಂತ್

ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ರಾಜ್ಯಕ್ಕೆ ಅವಮಾನ: ಬಿ.ಆರ್. ಜಯಂತ್

ಸಾಗರ: ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿ, ಮುಖಕ್ಕೆ ಮಸಿ ಬಳಿದಿರುವುದು   ಅಸುರಕ್ಷತೆಯ ಸಂಕೇತ ಎಂದು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶವೇ ತಿರುಗಿ ನೋಡುವಂತಹ ಚಳವಳಿಯನ್ನು ಸಂಘಟಿಸಿದ ಟಿಕಾಯತ್ ಮೇಲೆ ಕರ್ನಾಟಕದಲ್ಲಿ ಹಲ್ಲೆ ನಡೆದಿರುವುದು ರಾಜ್ಯಕ್ಕೆ ಅವಮಾನ ತರುವ ವಿಚಾರ. ಇದು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಜನರು ನಡೆಸಿರುವ ಕೃತ್ಯವಾಗಿದೆ. ಸರ್ಕಾರ ಇಂತಹವರ ರಕ್ಷಣೆಗೆ ನಿಲ್ಲದೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಾಗರ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಡೆದಾಟದ ಪ್ರಕರಣಗಳು ಹೆಚ್ಚುತ್ತಿವೆ. ಶಾಸಕರು ಇಂತಹ ಕೃತ್ಯಗಳಲ್ಲಿ ತೊಡಗಿರುವ ಎರಡು ಗುಂಪುಗಳನ್ನು ಕರೆದು ಮಾತುಕತೆ ನಡೆಸಿ ವಾತಾವರಣವನ್ನು ತಿಳಿಗೊಳಿಸಬೇಕು ಎಂದು ಹೇಳಿದರು.

‘ಕ್ಷೇತ್ರದಲ್ಲಿ ಭಯದ ವಾತಾವರಣ ಮೂಡುವಂತಾಗಲು ಆಡಳಿತ ಪಕ್ಷದ ಕುಮ್ಮಕ್ಕು ಕಾರಣ. ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿದ್ದರೆ ಇಂತಹ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಹೇಳಿದರು. ಕಾಂಗ್ರೆಸ್‌ನ ಪ್ರಮುಖರಾದ ಭರ್ಮಪ್ಪ, ಮಹಾಬಲ ಕೌತಿ, ಸದ್ದಾಂ, ಡಿ. ದಿನೇಶ್  ಉಪಸ್ಥಿತರಿದ್ದರು.

Join Whatsapp
Exit mobile version