Home ಟಾಪ್ ಸುದ್ದಿಗಳು ಅಮಾಯಕ ಮುಸ್ಲಿಂ ಯುವಕನ ಮೇಲೆ ಹಲ್ಲೆ: ಕೋಮು ಗಲಭೆ ನಡೆಸುವ ವ್ಯವಸ್ಥಿತ ಷಡ್ಯಂತ್ರ| ಪಾಪ್ಯುಲರ್ ಫ್ರಂಟ್...

ಅಮಾಯಕ ಮುಸ್ಲಿಂ ಯುವಕನ ಮೇಲೆ ಹಲ್ಲೆ: ಕೋಮು ಗಲಭೆ ನಡೆಸುವ ವ್ಯವಸ್ಥಿತ ಷಡ್ಯಂತ್ರ| ಪಾಪ್ಯುಲರ್ ಫ್ರಂಟ್ ಆರೋಪ

ಶಿವಮೊಗ್ಗ: ನಗರದ ಸೀಗೆಹಟ್ಟಿಯಲ್ಲಿ ತನ್ನ ಮನೆಯಲ್ಲಿ ಸಾಕಿದ ಹಸುವನ್ನು ಮೇಯಿಸಿ ಮನೆಗೆ ಮರಳುತ್ತಿರುವ ಸಂದರ್ಭದಲ್ಲಿ ಸಿದ್ದೀಕ್ ಎಂಬ ಮುಸ್ಲಿಂ ಯುವಕನನ್ನು ಅಟೋ ರಿಕ್ಷಾದಲ್ಲಿ ಬಂದ ಕೆಲ ಗೂಂಡಾಗಳು ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದು ಕೊಲೆ ಬೆದರಿಕೆ ಹಾಕಿದ್ದಾರೆ. ಸದ್ಯ ಸಿದ್ದೀಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂತಹ ಬೆಳವಣಿಗೆಗಳು ನಗರದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವುದು ನಗರವನ್ನು ಅಶಾಂತಿಗೆ ತಳ್ಳುವಂತಿದೆ.ನಗರದಲ್ಲಿ ಕೋಮು ಗಲಭೆ ನಡೆಸುವ ವ್ಯವಸ್ಥಿತ ಷಡ್ಯಂತ್ರ ಎಂದು ಪ್ಯಾಪುಲರ್ ಫ್ರಂಟ್ ಆರೋಪಿಸಿದೆ.

ಅಮಾಯಕ ಮುಸ್ಲಿಂ ಯುವಕ ಸಿದ್ದೀಕ್ ಮೇಲೆ ಹಲ್ಲೆ ನಡೆಸಿದ ಗೂಂಡಾಗಳನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಹಾಗೂ ಈ ವ್ಯವಸ್ಥಿತ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಿ ಬಂಧಿಸಬೇಕು ಹಾಗೂ ಅವರ ಮೇಲೆಯೂ ಕಾನೂನು ಕ್ರಮ ಜರುಗಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಉಬೇದುಲ್ಲಾ ಆಗ್ರಹಿಸಿದ್ದಾರೆ.

Join Whatsapp
Exit mobile version