Home ಟಾಪ್ ಸುದ್ದಿಗಳು ಅತೀಕ್ ಅಹ್ಮದ್, ಅಶ್ರಫ್ ಹತ್ಯೆ: ತಲಾ ಮೂವರು ಸದಸ್ಯರ ಎರಡು ಟಾಸ್ಕ್ ಫೋರ್ಸ್ ರಚಿಸಿದ ಯುಪಿ...

ಅತೀಕ್ ಅಹ್ಮದ್, ಅಶ್ರಫ್ ಹತ್ಯೆ: ತಲಾ ಮೂವರು ಸದಸ್ಯರ ಎರಡು ಟಾಸ್ಕ್ ಫೋರ್ಸ್ ರಚಿಸಿದ ಯುಪಿ ಸರಕಾರ

ಲಕ್ನೋ: ಮಾಜಿ ಸಂಸದ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರ ಹತ್ಯೆಯ ತನಿಖೆಗೆ ಉತ್ತರ ಪ್ರದೇಶ ಸರಕಾರವು ತಲಾ ಮೂವರು ಸದಸ್ಯರ ಎರಡು ಸ್ಪೆಶಲ್ ಟಾಸ್ಕ್ ಫೋರ್ಸ್ ಗಳನ್ನು ರಚಿಸಿದೆ.


ಅಸಿಸ್ಟೆಂಟ್ ಡಿಸಿಪಿ ಸತೀಶ್ ಚಂದ್ರ ನೇತೃತ್ವದ ಟಾಸ್ಕ್ ಫೋರ್ಸ್ ಅತೀಕ್ ಅಹ್ಮದ್ ಕೊಲೆಯ ತನಿಖೆಯನ್ನು ನಡೆಸಲಿದೆ. ಪ್ರಯಾಗ್ ರಾಜ್ ಪೊಲೀಸರು ಶಾಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವಂತೆ ರಚಿಸಲಾಗಿರುವ ಇನ್ನೊಂದು ಟಾಸ್ಕ್ ಫೋರ್ಸ್ ಮೊದಲ ಟಾಸ್ಕ್ ಫೋರ್ಸ್’ನ ನಿರ್ವಹಣೆ ನೋಡುತ್ತದೆ.


ಭಾನುವಾರ ಸಂಜೆ ಕೆಲವೇ ಬಂಧುಗಳು ಮತ್ತು ಬಹುತೇಕ ಪೊಲೀಸರೇ ಸೇರಿ ಅತೀಕ್ ಅಹ್ಮದ್ ಸಹೋದರರ ದಪನವನ್ನು ಹಿಂದಿನ ದಿನ ಮಗನನ್ನು ದಪನ ಮಾಡಿದ ಸ್ಥಳದ ಪಕ್ಕದಲ್ಲಿಯೇ ನೆರವೇರಿಸಲಾಯಿತು.


ತನಿಖೆ ಗುಣಾತ್ಮಕವಾಗಿ ನಡೆಯುವಂತೆ ರಚಿಸಿದ ಎರಡನೆಯ ಟಾಸ್ಕ್ ಫೋರ್ಸ್ ಪ್ರಯಾಗ್ ರಾಜ್ ನ ಹೆಚ್ಚುವರಿ ಡಿಜಿಪಿ ನೇತೃತ್ವದ್ದಾಗಿದೆ.
ಈ ಟಾಸ್ಕ್ ಫೋರ್ಸ್ ನ ಇನ್ನಿಬ್ಬರೆಂದರೆ ಪ್ರಯಾಗ್ ರಾಜ್ ನ ಪೊಲೀಸ್ ಕಮಿಷನರ್ ಮತ್ತು ಲಕ್ನೋ ಫೊರೆನ್ಸಿಕ್ ಸಯನ್ಸ್ ಪ್ರಯೋಗಾಲಯದ ಮುಖ್ಯಸ್ಥರು.
ಅತೀಕ್ ಸಹೋದರರನ್ನು ಕೊಲೆ ಮಾಡಿದ ಮೂವರು ಆರೋಪಿಗಳನ್ನು ಅರುಣ್ ಮೌರ್ಯ, ಸನ್ನಿ ಸಿಂಗ್, ಲವ್ಲೇಶ್ ತಿವಾರಿಯವರನ್ನು ನೈನಿ ಜೈಲಿನ ಭದ್ರತಾ ಸೆಲ್ ಗೆ ಕಳುಹಿಸಲಾಗಿದೆ.

Join Whatsapp
Exit mobile version