Home ಟಾಪ್ ಸುದ್ದಿಗಳು ಚುನಾವಣೆ ಹೊತ್ತಲ್ಲೇ ಗ್ಯಾಸ್ ಸಿಲಿಂಡರ್‌ ಬೆಲೆ 350 ರೂ. ಹೆಚ್ಚಿಸಿದ ಬಿಜೆಪಿ ಸರಕಾರ!

ಚುನಾವಣೆ ಹೊತ್ತಲ್ಲೇ ಗ್ಯಾಸ್ ಸಿಲಿಂಡರ್‌ ಬೆಲೆ 350 ರೂ. ಹೆಚ್ಚಿಸಿದ ಬಿಜೆಪಿ ಸರಕಾರ!

ದೆಹಲಿ: ಕೇಂದ್ರ ಬಿಜೆಪಿ ಸರಕಾರ‌ ಗೃಹ ಬಳಕೆ ಎಲ್ಪಿಜಿ ಗ್ಯಾಸ್ ಮತ್ತು ವಾಣಿಜ್ಯ ಎಲ್’ಪಿಜಿ ಗ್ಯಾಸ್ ಸಿಲಿಂಡರ್’ಗಳ ಬೆಲೆಯನ್ನು ಮಾರ್ಚ್ 1 ರಿಂದ ಜಾರಿಗೆ ಬರುವಂತೆ ಹೆಚ್ಚಿಸಿದೆ.

19 ಕೆಜಿ ವಾಣಿಜ್ಯ ಎಲ್’ಪಿಜಿ ಸಿಲಿಂಡರ್ ಬೆಲೆಯನ್ನು 350.50 ರೂ.ಗೆ ಹೆಚ್ಚಿಸಲಾಗಿದೆ, ಈ ಹೆಚ್ಚಳದೊಂದಿಗೆ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 2119.50 ರೂ. ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ.

ದೆಹಲಿಯಲ್ಲಿ 14.2 ಕೆಜಿ ಎಲ್’ಪಿಜಿ ಸಿಲಿಂಡರ್’ಗಳ ಹೊಸ ಪರಿಷ್ಕೃತ ಬೆಲೆ ಇಂದಿನಿಂದ 1053 ರೂ.ಗಳ ಬದಲು 1103 ರೂ. ಮುಂಬೈನಲ್ಲಿ ಈ ಸಿಲಿಂಡರ್ ಅನ್ನು 1052.50 ರೂ.ಗಳ ಬದಲು 1102.5 ರೂ.ಗೆ ಮಾರಾಟ ಮಾಡಲಾಗುವುದು. ಕೋಲ್ಕತಾದಲ್ಲಿ 1079 ರೂ.ಗಳ ಬದಲು 1129 ರೂ.ಗೆ ಮತ್ತು ಚೆನ್ನೈನಲ್ಲಿ 1068.50 ರೂ.ಗಳ ಬದಲು 1118.5 ರೂ. ಈ ವರ್ಷ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಇದು ಎರಡನೇ ಹೆಚ್ಚಳವಾಗಿದೆ. ಇದಕ್ಕೂ ಮೊದಲು ಜನವರಿ 1 ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಪ್ರತಿ ಯೂನಿಟ್ಗೆ 25 ರೂ.ಗಳಷ್ಟು ಹೆಚ್ಚಿಸಲಾಗಿತ್ತು.

Join Whatsapp
Exit mobile version