Home ಟಾಪ್ ಸುದ್ದಿಗಳು ಬ್ರೆಜಿಲ್ ನಲ್ಲಿ ಭಾರಿ ಮಳೆ: 78 ಮಂದಿ ಸಾವು

ಬ್ರೆಜಿಲ್ ನಲ್ಲಿ ಭಾರಿ ಮಳೆ: 78 ಮಂದಿ ಸಾವು

ಸಾವೊಪೌಲೊ: ಬ್ರೆಜಿಲ್ ನ ದಕ್ಷಿಣ ಭಾಗದಲ್ಲಿರುವ ‘ರಿಯೊ ಗ್ರಂಡ್ ಡೊ ಸುಲ್’ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹದಲ್ಲಿ ಈವರೆಗೆ 78 ಜನರು ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ ಎಂದು ರಾಜ್ಯ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

ಪ್ರವಾಹದಿಂದಾಗಿ 1,15,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಬಹುತೇಕ ನಗರಗಳೂ ಸಂಪೂರ್ಣವಾಗಿ ಜಲಾವೃತಗೊಂಡಿವೆ. ಕೆಲವು ನಗರಗಳಲ್ಲಿ 150 ವರ್ಷದಲ್ಲೇ ಅತ್ಯಧಿಕ ನೀರಿನ ಮಟ್ಟ ಕಾಣಿಸಿಕೊಂಡಿದೆ. ಜನರು ಪಕ್ಕದ ರಾಜ್ಯಗಳ ತಮ್ಮ ಸಂಬಂಧಿಕರ ಮನೆಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ.

Join Whatsapp
Exit mobile version