Home ಟಾಪ್ ಸುದ್ದಿಗಳು ಇಥಿಯೋಪಿಯಾದಲ್ಲಿ ಭಾರೀ ಭೂಕುಸಿತ: 157 ಮಂದಿ ಸಾವು

ಇಥಿಯೋಪಿಯಾದಲ್ಲಿ ಭಾರೀ ಭೂಕುಸಿತ: 157 ಮಂದಿ ಸಾವು

ಅಡಿಸ್ ಅಬಾಬಾ: ಭಾರೀ ಮಳೆಯಿಂದ ಹಾನಿಗೊಳಗಾದ ಇಥಿಯೋಪಿಯಾದ ಭಾಗದಲ್ಲಿ ಭೂ ಕುಸಿತವಾಗಿ 157 ಜನರು ಸಾವನ್ನಪ್ಪಿದ್ದಾರೆ.


ಹಲವು ಜನರು ಮಣ್ಣಿನ ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.


ದಕ್ಷಿಣ ಇಥಿಯೋಪಿಯಾದ ಕೆಂಚೋ ಶಾಚಾ ಗೊಜ್ಡಿ ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಬಲಿಯಾದವರಲ್ಲಿ ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರು ಕೂಡ ಸೇರಿದ್ದಾರೆ. ಸೋಮವಾರ ತಡರಾತ್ರಿ ಈ ಭೂಕುಸಿತದಲ್ಲಿ 55 ಜನ ಮೃತಪಟ್ಟಿದ್ದರು. ಇಂದು ಆ ಸಾವಿನ ಸಂಖ್ಯೆ 157ಕ್ಕೆ ಏರಿದೆ. ಇನ್ನೂ ಮಣ್ಣಿನ ಅಡಿಯಲ್ಲಿ ಹಲವು ಜನರು ಸಿಲುಕಿರುವ ಸಾಧ್ಯತೆಯಿದೆ. ಆದರೆ, ಅವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

Join Whatsapp
Exit mobile version