ಪಾಟ್ನಾ: ಟ್ರಕ್ ಹರಿದು ಮಕ್ಕಳು ಸೇರಿ 15 ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಮಹಾನರ್-ಹಾಜಿಪುರ ಮುಖ್ಯ ರಸ್ತೆಯಲ್ಲಿರುವ ದೇಸರಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ತಾನ್‌ಪುರ ಟೋಲಾ 28 ರಲ್ಲಿ ನಡೆದಿದೆ.
ನಿಯಂತ್ರಣ ತಪ್ಪಿದ ಟ್ರಕ್ ಅನೇಕ ಜನರ ಮೇಲೆ ಹರಿದು ಹಲವು ಮಕ್ಕಳು ಸೇರಿದಂತೆ ಸುಮಾರು 15 ಮಂದಿ ಸಾವನ್ನಪ್ಪಿದ್ದಾರೆ.
ಈ ಭೀಕರ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಘಟನೆಯ ನಂತರ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳದಲ್ಲಿ ಪರಿಹಾರ-ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ.
ನಿಯಂತ್ರಣಕ್ಕೆ ಸಿಗದ ಟ್ರಕ್ ಪೂಜೆ ಮಾಡುತ್ತಿದ್ದವರ ಮೇಲೆ ಹರಿದಿದೆ ಎಂದು ಹೇಳಲಾಗುತ್ತಿದೆ.