Home ಟಾಪ್ ಸುದ್ದಿಗಳು ಮುಸ್ಲಿಂ ವೃದ್ಧನಿಗೆ ಥಳಿಸಿದ ವೀಡಿಯೊ ಪ್ರಕರಣ : ನಿರೀಕ್ಷಣಾ ಜಾಮೀನು ಕೋರಿ ಟ್ವಿಟರ್‌ ಇಂಡಿಯಾ ಮುಖ್ಯಸ್ಥನಿಂದ...

ಮುಸ್ಲಿಂ ವೃದ್ಧನಿಗೆ ಥಳಿಸಿದ ವೀಡಿಯೊ ಪ್ರಕರಣ : ನಿರೀಕ್ಷಣಾ ಜಾಮೀನು ಕೋರಿ ಟ್ವಿಟರ್‌ ಇಂಡಿಯಾ ಮುಖ್ಯಸ್ಥನಿಂದ ಅರ್ಜಿ

ನವದೆಹಲಿ : ಉತ್ತರ ಪ್ರದೇಶದ ಲೋನಿಯಲ್ಲಿ ಮುಸ್ಲಿಂ ವೃದ್ಧರೊಬ್ಬರಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ, ಟ್ವಿಟರ್‌ ಇಂಡಿಯಾ ಮುಖ್ಯಸ್ಥ ಮನೀಶ್‌ ಮಹೇಶ್ವರಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ದೆಹಲಿ – ಉತ್ತರ ಪ್ರದೇಶ ಪೊಲೀಸರು ತಮ್ಮನ್ನು ವಿಚಾರಣೆಗೆ ಗುರಿಪಡಿಸುವ ಮೊದಲೇ ಅವರು ನಿರೀಕ್ಷಣಾ ಜಾಮೀನಿನ ಮೊರೆ ಹೋಗಿದ್ದಾರೆ.

ಘಾಝಿಯಾಬಾದ್‌ ನ ಲೋನಿಯ ಮುಸ್ಲಿಂ ವ್ಯಕಿಗೆ ಥಳಿಸಿದ ಪ್ರಕರಣದಲ್ಲಿ ವೀಡಿಯೊವನ್ನು ಕೋಮು ಬಣ್ಣ ನೀಡಿ ಪ್ರಸಾರ ಮಾಡಲಾಗಿದೆ ಎಂಬ ಆರೋಪದಲ್ಲಿ ಟ್ವಿಟರ್‌ ಇಂಡಿಯಾ ವಿರುದ್ಧ ದೂರು ದಾಖಲಾಗಿದೆ.

ಹಲ್ಲೆಗೊಳಗಾದ ಮುಸ್ಲಿಂ ವೃದ್ಧನಿಗೆ ಗುಂಪೊಂದು ಥಳಿಸುವ ವೇಳೆ ಜೈಶ್ರೀರಾಂ ಘೋಷಣೆ ಕೂಗುವಂತೆ ಒತ್ತಾಯಿಸಿತ್ತು ಎಂದು ದೂರು ನೀಡಲಾಗಿತ್ತು. ಆದರೆ, ಈ ಘಟನೆಯಲ್ಲಿ ಕೋಮು ಉದ್ದೇಶ ಇರಲಿಲ್ಲ. ಆದರೆ, ಕೆಲವು ಪತ್ರಕರ್ತರು, ವರದಿಗಾರರು, ಸಾಮಾಜಿಕ ಕಾರ್ಯಕರ್ತರು ಈ ಘಟನೆಗೆ ಕೋಮು ಬಣ್ಣ ನೀಡಿದ್ದಾರೆ ಎಂದು ಆಪಾದಿಸಿ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಟ್ವಿಟರ್‌ ಇಂಡಿಯಾ ವಿರುದ್ಧವೂ ದೂರು ದಾಖಲಾಗಿತ್ತು.

Join Whatsapp
Exit mobile version