Home ಕರಾವಳಿ ಅಸಾಸುಲ್ ಇಸ್ಲಾಮ್ ಸ್ಟುಡೆಂಟ್ ಫೆಡರೇಶನ್ (ರಿ) ಪಲ್ಲಮಜಲು ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ಅಸಾಸುಲ್ ಇಸ್ಲಾಮ್ ಸ್ಟುಡೆಂಟ್ ಫೆಡರೇಶನ್ (ರಿ) ಪಲ್ಲಮಜಲು ಮಹಾಸಭೆ; ನೂತನ ಪದಾಧಿಕಾರಿಗಳ ಆಯ್ಕೆ

► ಅಧ್ಯಕ್ಷರಾಗಿ ಶರೀನ್ ಪಲ್ಲಮಜಲು  ಮರು ಆಯ್ಕೆ

ಬಂಟ್ವಾಳ: ಅಸಾಸುಲ್ ಇಸ್ಲಾಮ್ ಸ್ಟುಡೆಂಟ್ ಫೆಡರೇಶನ್ (ರಿ) ಪಲ್ಲಮಜಲು ಇದರ 2021-22 ನೆಯ ಸಾಲಿನ ಮಹಾಸಭೆಯು ಸಂಸ್ಥೆಯ ಕಚೇರಿಯಲ್ಲಿ ಜರಗಿತು.

ಹಯಾತುಲ್ ಇಸ್ಲಾಮ್ ಜುಮ್ಮಾ ಮಸೀದಿ ಪಲ್ಲಮಜಲು ಖತೀಬ್  ಉಸ್ತಾದ್ ಬಹು. ಶರೀಫ್ ಅರ್ಷದಿ ಅವರು  ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಅತ್ಯ ಅಮೂಲ್ಯವಾದ ಸಲಹೆಗಳನ್ನು ನೀಡಿ,  ಸಂಸ್ಥೆಯ ಎಲ್ಲಾ ಕಾರ್ಯವೈಖರಿಗಳಿಗೆ ದುಡಿದಂತಹ ಮರ್ಹೂಮ್ ಇಮ್ರಾನ್ ಹಾಗೂ ರಶೀದ್ ರವರನ್ನು ಈ ಸಂಧರ್ಭದಲ್ಲಿ ಸ್ಮರಿಸಿ ದುವಾ ಆಶೀರ್ವಚನಗೈದರು.

ಪ್ರಸ್ತುತ ಸಭೆಯಲ್ಲಿ 2021-2022 ನೇ ಸಾಲಿನ  ಸಮಿತಿಯನ್ನು ಬರ್ಖಾಸ್ತು ಮಾಡಲಾಯಿತು. 2022-23 ನೇ ಸಾಲಿನ  ನೂತನ  ಗೌರವಾಧ್ಯಕ್ಷರಾಗಿ ರಫೀಕ್ ಆಯ್ಕೆಯಾದರು. ಅಧ್ಯಕ್ಷರಾಗಿ ಶರೀನ್ ಪಲ್ಲಮಜಲು  ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಝಕರಿಯ NK, ಕಾರ್ಯದರ್ಶಿಯಾಗಿ ಸುಹೈಲ್ ಪಲ್ಲಮಜಲು, ಜೊತೆ ಕಾರ್ಯದರ್ಶಿಯಾಗಿ ಆಫೀಝ್, ಸಂಘಟನಾ ಕಾರ್ಯದರ್ಶಿಯಾಗಿ ಮುಸ್ತಫ, ಕೋಶಧಿಕಾರಿಯಾಗಿ ನೌಶಾದ್ ರವರು ಆಯ್ಕೆ ಯಾದರು.

ಸಂಸ್ಥೆಯ ಅಧ್ಯಕ್ಷ ಶರೀನ್ ಪಲ್ಲಮಜಲು   ಮಾತನಾಡಿ, ಅಸಾಸುಲ್ ಇಸ್ಲಾಮ್ ಸ್ಟೂಡೆಂಟ್ ಫೆಡರೇಶನ್ (ರಿ) ಪಲ್ಲಮಜಲು ಸಂಸ್ಥೆಯು ಸಾಮಾಜಿಕ ಕಾರ್ಯಕ್ರಮಗಳಾದ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ಸಾಮೂಹಿಕ ವಿವಾಹ ಹಾಗೂ ಬಡ ಹೆಣ್ಣು ಮಕ್ಕಳ ಮದುವೆಗೆ ಧನ ಸಹಾಯ, ಬಡವರ ಮನೆ ನಿರ್ಮಾಣಕ್ಕೆ  ಸಹಾಯ, ಇಫ್ತಾರ್ ಕಾರ್ಯಕ್ರಮ ಸಹಿತ  ಹತ್ತು ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. 2023 ರಲ್ಲಿ ನಡೆಯಲಿರುವ ಸಂಸ್ಥೆಯ  20ನೇ ವಾರ್ಷಿಕೋತ್ಸವದ ಅಂಗವಾಗಿ  ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದರು.

ಸಮಿತಿಯ 2022 ನೇ ಸಾಲಿನ  ಕಾರ್ಯವೈಖರಿಗಳನ್ನು ಕಾರ್ಯದರ್ಶಿ ಸುಹೈಲ್ ರವರು ವಿವರಿಸಿದರು.  ಅಧ್ಯಕ್ಷ ಶರೀನ್ ಪಲ್ಲಮಜಲು   ಸಂಸ್ಥೆಯ ಎಲ್ಲಾ ಕಾರ್ಯಕ್ರಮ ಹಾಗೂ ಕಾರ್ಯವೈಕರಿಗಳಿಗೆ ಸಹಕರಿಸಿದ ಸದಸ್ಯರಿಗೆ ಮತ್ತು ಜಮಾತಿನ ಎಲ್ಲಾ ಆತ್ಮೀಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

.

Join Whatsapp
Exit mobile version