2023ರ ವಿಧಾನಸಭಾ ಚುನಾವಣೆ | ಬೆಳ್ತಂಗಡಿಯಿಂದ ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ ಮೂವರು ಆಕಾಂಕ್ಷಿಗಳು

ಬೆಳ್ತಂಗಡಿ : 2023 ರ ವಿಧಾನಸಭಾ ಚುನಾವಣೆಯಲ್ಲಿ ಬೆಳ್ತಂಗಡಿಯಿಂದ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಮೂವರು ನಾಯಕರು ಕೈ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಸಚಿವ ಕೆ. ಗಂಗಾಧರ ಗೌಡ, ಕಾಂಗ್ರೆಸ್ ನ ಯುವ ನಾಯಕ ರಕ್ಷಿತ್ ಶಿವರಾಂ ಹಾಗೂ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಈ ಮೂವರು ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳು.

- Advertisement -

ಅರ್ಜಿ ಸಲ್ಲಿಸಲು ಇಂದು ( ಮಂಗಳವಾರ) ಕೊನೆಯ ದಿನವಾದ್ದರಿಂದ ನಿನ್ನೆಯ ದಿನ (ಸೋಮವಾರ) ರಕ್ಷಿತ್ ಶಿವರಾಂ ಅರ್ಜಿ ಸಲ್ಲಿಸಿದ್ದರು. ಇಂದು ವಸಂತ ಬಂಗೇರ ಮತ್ತು ಗಂಗಾಧರ ಗೌಡ ಬೆಂಗಳೂರಿಗೆ ತೆರಳಿ ಅರ್ಜಿ ಸಲ್ಲಿಸಿದ್ದಾರೆ.