Home ಟಾಪ್ ಸುದ್ದಿಗಳು ವಿಶ್ವಪಾರಂಪರಿಕ ತಾಣ ಪಟ್ಟಿಗೆ ಅಸ್ಸಾಂ ರಾಜ ಮನೆತನದ ‘ದಿಬ್ಬ ಸಮಾಧಿ’ ಮೊಯ್ಡಮ್ಸ್‌ ಸೇರ್ಪಡೆ

ವಿಶ್ವಪಾರಂಪರಿಕ ತಾಣ ಪಟ್ಟಿಗೆ ಅಸ್ಸಾಂ ರಾಜ ಮನೆತನದ ‘ದಿಬ್ಬ ಸಮಾಧಿ’ ಮೊಯ್ಡಮ್ಸ್‌ ಸೇರ್ಪಡೆ

ನವದೆಹಲಿ: ಅಸ್ಸಾಂನ ಅಹೋಮ್ ರಾಜ ಮನೆತನದ ‘ದಿಬ್ಬ ಸಮಾಧಿ’ ಆಗಿರುವ ‘ಮೊಯ್ಡಮ್ಸ್‌’ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿದೆ. ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದ ಭಾರತದ 43ನೇ ತಾಣ ಇದಾಗಿದ್ದು, ಸಾಂಸ್ಕೃತಿಕ ತಾಣಗಳ ವಿಭಾಗದಲ್ಲಿ ಸೇರ್ಪಡೆಗೊಂಡ ಈಶಾನ್ಯ ಭಾರತದ ಮೊದಲ ಸ್ಥಳವಾಗಿದೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ 46ನೇ ವಿಶ್ವಪಾರಂಪರಿಕ ಸಮ್ಮೇಳನದಲ್ಲಿ ಮೊಯ್ಡಮ್ಸ್‌ ಹೆಸರು ಘೋಷಣೆಯಾಗಿದೆ.

ಮೊಯ್ಡಮ್ಸ್ ಪಿರಾಮಿಡ್ ಆಕೃತಿಯಲ್ಲಿರುತ್ತದೆ. ಚಿಕ್ಕ ಮಣ್ಣಿನ ದಿಬ್ಬಗಳಿಗೆ ಬಾಗಿಲು ಇರುತ್ತಿದ್ದು, ಒಳಗಡೆ ಕಮಾನುಗಳನ್ನು ಹೊಂದಿದೆ. ಇದೊಂದು ಸಮಾಧಿ ಸ್ಥಳ. ಈ ಸಮಾಧಿಗಳು ಸುಮಾರು 600 ವರ್ಷಗಳ ಹಿಂದೆ ಅಸ್ಸಾಂ ಆಳುತ್ತಿದ್ದ ತೈ- ಅಹೋಮ್‌ ರಾಜವಂಶದವರ ಸಮಾಧಿಗಳಾಗಿವೆ.

Join Whatsapp
Exit mobile version