Home ಟಾಪ್ ಸುದ್ದಿಗಳು ಅಸ್ಸಾಂ: ಪೌರತ್ವ ಇಲ್ಲದಿದ್ದರೆ ಏನಾಗಬಹುದೆಂದು ಊಹಿಸಿದ್ದೀರಾ? 85ರ ಹರೆಯದ ಸೂರ್ಯ ಖಾತೂನ್ ಹೇಳುವುದೇನು???

ಅಸ್ಸಾಂ: ಪೌರತ್ವ ಇಲ್ಲದಿದ್ದರೆ ಏನಾಗಬಹುದೆಂದು ಊಹಿಸಿದ್ದೀರಾ? 85ರ ಹರೆಯದ ಸೂರ್ಯ ಖಾತೂನ್ ಹೇಳುವುದೇನು???

ಅಸ್ಸಾಂ: “ಪೌರತ್ವವಿಲ್ಲದ ಸ್ಥಿತಿ ಹೇಗಿರುತ್ತದೆ ಎಂದು ಎಂದಾದರೂ ಆಲೋಚಿಸಿದ್ದೀರಾ? ನಾನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ಪೊಲೀಸರನ್ನು ನೋಡಿದಾಗ ನನಗೆ ಭಯವಾಗುತ್ತದೆ. ನನ್ನ ಪೌರತ್ವವನ್ನು ಸಾಬೀತುಪಡಿಸಲು ನಾನು ಅಂತರರಾಷ್ಟ್ರೀಯ ನ್ಯಾಯಮಂಡಳಿಗೆ ಹೋದರೆ ನಾನು ಅಲ್ಲಿಯೇ ಸಾಯುತ್ತೇನೆ. ಎನ್. ಆರ್. ಸಿ ಯ ಬಗ್ಗೆ ಯೋಚಿಸುತ್ತಾ ನನಗೆ ನಿದ್ದೆ ಕೂಡಾ ಬರುತ್ತಿಲ್ಲ” – ಅಸ್ಸಾಮಿನ ಪೌರತ್ವ ಪಟ್ಟಿಯಿಂದ ಹೊರಗುಳಿಯಲ್ಪಟ್ಟ 85 ವರ್ಷದ ಸೂರ್ಯ ಖಾತೂನ್ ರ ಮಾತುಗಳು ಇವು.

ಸೂರ್ಯ ಖಾತೂನ್ ರನ್ನು ಹೊರತುಪಡಿಸಿ ಕುಟುಂಬದ ಎಲ್ಲರೂ ಪೌರತ್ವ ಪಟ್ಟಿಯಲ್ಲಿದ್ದಾರೆ. “ನಾನು ಅಸ್ಸಾಮಿನಲ್ಲಿ ಜನಿಸಿದವಳು. ಅಧಿಕೃತ ಗುರುತಿನ ಚೀಟಿ ಹೊಂದಿದ್ದೇನೆ. ಆದರೂ ಪೌರತ್ವ ಪಟ್ಟಿಯಿಂದ ಹೊರಗಿಡಲಾಗಿದೆ” ಎಂಬುದಾಗಿ ಖಾತೂನ್ ಹೇಳುತ್ತಾರೆ. ಅಸ್ಸಾಂ  2019ರ ಆಗಸ್ಟ್ 31ರಂದು  ಎನ್. ಆರ್. ಸಿ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಅಸ್ಸಾಂನಲ್ಲಿ ನೆಲೆಸುತ್ತಿದ್ದ 19ಲಕ್ಷ ಜನರ ಹೆಸರನ್ನು ಈ ಪಟ್ಟಿಯಿಂದ ಹೊರಹಾಕಲಾಗಿತ್ತು. ಅವರಲ್ಲಿ ಸೂರ್ಯ ಕೂಡಾ ಒಬ್ಬರು.

Join Whatsapp
Exit mobile version