Home ರಾಷ್ಟ್ರೀಯ ಸ್ಟಾಕ್ ಟ್ರೇಡಿಂಗ್ ಹಗರಣ: ಅಸ್ಸಾಮಿ ನಟಿ ಸುಮಿ ಬೋರಾ ಬಂಧನ

ಸ್ಟಾಕ್ ಟ್ರೇಡಿಂಗ್ ಹಗರಣ: ಅಸ್ಸಾಮಿ ನಟಿ ಸುಮಿ ಬೋರಾ ಬಂಧನ

ಗುವಾಹಟಿ: ಬಹುಕೋಟಿ ಆನ್ ಲೈನ್ ಸ್ಟಾಕ್ ಟ್ರೇಡಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಅಸ್ಸಾಮಿ ನಟಿ ಸುಮಿ ಬೋರಾ ಮತ್ತು ಅವರ ಪತಿ ತಾರ್ಕಿಕ್ ಬೋರಾ ಅವರನ್ನು ವಿಶೇಷ ಕಾರ್ಯಪಡೆ(ಎಸ್ಟಿಎಫ್ ) ಬಂಧಿಸಿದೆ.

ಪೊಲೀಸರ ಮುಂದೆ ಹಾಜರಾಗಲು ವಿಫಲರಾದ ನಂತರ ದಂಪತಿಯನ್ನು ದಿಬ್ರುಗಢದಲ್ಲಿ ಬಂಧಿಸಲಾಯಿತು. ಪ್ರಮುಖ ಆರೋಪಿ ಬಿಶಾಲ್ ಫುಕನ್ ನನ್ನು ಈ ಹಿಂದೆ ಬಂಧಿಸಲಾಗಿತ್ತು.


ಪ್ರಕರಣದಲ್ಲಿ ಪ್ರಮುಖ ಆರೋಪಿ ಬಿಶಾಲ್ ಫುಕಾನ್(22)ನನ್ನು ಬಂಧಿಸಿದ ನಂತರ ದಂಪತಿ ಮತ್ತು ಇತರ ನಾಲ್ವರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿತ್ತು.


ಕೆಲವು ಸ್ಥಳೀಯ ಟೆಲಿವಿಷನ್ ಚಾನೆಲ್ ಗಳಿಗೆ ನಟಿ ಸುಮಿ ಬೋರಾ ಕಳೂಹಿಸಿದ ವೀಡಿಯೋದಲ್ಲಿ “ನಾನು ಪೊಲೀಸರಿಗೆ ಶರಣಾಗಿ ಸಂಪೂರ್ಣವಾಗಿ ಸಹಕರಿಸುತ್ತೇನೆ” ಎಂದು ಹೇಳಿಕೊಂಡಿದ್ದಾಳೆ.


ಅಸ್ಸಾಂನಲ್ಲಿ ಮಾರುಕಟ್ಟೆ ಹೂಡಿಕೆ ಹೆಸರಿನಲ್ಲಿ ಹಣ ದ್ವಿಗುಣಗೊಳಿಸುವ (ಸ್ಟಾಕ್ ಟ್ರೇಡಿಂಗ್) ನಕಲಿ ಕಂಪನಿ ಹೊಂದಿದ್ದ ಫುಕನ್ 2 ಸಾವಿರ ಕೋಟಿ ರೂ. ಸಾರ್ವಜನಿಕರಿಂದ ವಸೂಲಿ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ. ಈ ಹಗರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ತನಿಖೆಯನ್ನು ಸಿಐಡಿ ವಹಿಸಿಕೊಂಡಿದ್ದು, ಎಸ್ ಐಟಿ ರಚಿಸಲಾಗಿದೆ.

Join Whatsapp
Exit mobile version