Home ಟಾಪ್ ಸುದ್ದಿಗಳು ಅಸ್ಸಾಮ್ ನಲ್ಲಿ ಜಾನುವಾರು ಹತ್ಯೆ ತಡೆ ಮಸೂದೆ ಜಾರಿ: ಧಾರ್ಮಿಕ ಕೇಂದ್ರದ 5 ಕಿ.ಮೀ. ವ್ಯಾಪ್ತಿಯಲ್ಲಿ...

ಅಸ್ಸಾಮ್ ನಲ್ಲಿ ಜಾನುವಾರು ಹತ್ಯೆ ತಡೆ ಮಸೂದೆ ಜಾರಿ: ಧಾರ್ಮಿಕ ಕೇಂದ್ರದ 5 ಕಿ.ಮೀ. ವ್ಯಾಪ್ತಿಯಲ್ಲಿ ಗೋಹತ್ಯೆ, ಮಾರಾಟ ನಿಷೇಧ

ಗುವಾಹಟಿ: ಅಸ್ಸಾಮ್ ನ ಬಿಜೆಪಿ ಸರ್ಕಾರ ಆಗಸ್ಟ್ 13 ರಂದು ವಿಧಾನ ಸಭೆಯಲ್ಲಿ ಗೋಹತ್ಯೆ ತಡೆ ಮಸೂದೆಯನ್ನು ಅಂಗೀಕರಿಸಿದೆ.
ಈ ಮಸೂದೆಯನ್ವಯ ಇನ್ನು ಮುಂದಕ್ಕೆ ಅಸ್ಸಾಮ್ ನಿಂದ ಹಸುವನ್ನು ಬೇರೆ ರಾಜ್ಯಕ್ಕೆ ಸಾಗಿಸುವಂತಿಲ್ಲ. ಮಾತ್ರವಲ್ಲದೆ ನೂತನ ಕಾಯ್ದೆಯಿಂದಾಗಿ ದೇವಸ್ಥಾನ ಅಥವಾ ಹಿಂದೂ ಧಾರ್ಮಿಕ ಕೇಂದ್ರದ ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಗೋಹತ್ಯೆ, ಮಾರಾಟ, ಗೋಮಾಂಸ ಖರೀದಿಗೆ ಬ್ರೇಕ್ ಬೀಳಲಿದೆ.

ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಅಸ್ಸಾಮ್ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು. ಮಾತ್ರವಲ್ಲದೆ ಪ್ರತಿಪಕ್ಷಗಳು ಈ ಮಸೂದೆಗೆ ತಿದ್ದುಪಡಿಗೆ ಶಿಫಾರಸು ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಸರಿಯಾದ ಸಲಹೆ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿದೆಯೆಂದು ಘೋಷಿಸಿದರು.ಗೋಮಾಂಸ ಸೇವಿಸದ ಜನರ ಸಮ್ಮುಖದಲ್ಲಿ ಗೋಮಾಂಸ ಸೇವಿಸುವುದು ಈ ಕಾನೂನಿನ ಅನ್ವಯ ಅಪರಾಧವಾಗಿದೆಯೆಂದು ಅವರು ಮಾಧ್ಯಮಕ್ಕೆ ತಿಳಿಸಿದರು.

ನೂತನವಾಗಿ ಜಾರಿಯಾದ ಗೋಹತ್ಯೆ ತಡೆ ಕಾಯ್ದೆ ಪ್ರಕಾರ ಇನ್ನು ಮುಂದಕ್ಕೆ ದೇವಸ್ಥಾನ, ಮಠದ 5 ಕಿ.ಮೀ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಗೋಹತ್ಯೆ, ಗೋಮಾಂಸ ಖರೀದಿ ನಡೆಸುವಂತಿಲ್ಲ. ಮಾತ್ರವಲ್ಲದೆ ಹಿಂದುಗಳು, ಸಿಖ್ಖರು, ಜೈನರು, ಮುಸ್ಲಿಮರ ಗೋಮಾಂಸ ಸೇವನೆಗೆ ತಡೆ ಬೀಳಲಿದೆಯೆಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

Join Whatsapp
Exit mobile version