ಗುವಾಹಟಿ: ಅಸ್ಸಾಮ್’ನಲ್ಲಿ ಇಸ್ಲಾಮ್ ವಿರೋಧಿ ನೀತಿ ಮುಂದುವರಿದಿದ್ದು, ಮತ್ತೊಂದು ಮದರಸಾವನ್ನು ಧ್ವಂಸಗೊಳಿಸಿರುವ ಘಟನೆ ಅಸ್ಸಾಮ್’ನ ಗೋಲ್’ಪಾರಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಟಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪಖಿಯುರಾ ಚಾರ್’ನಲ್ಲಿರುವ ಮದರಸಾ ಮತ್ತು ಅದರ ಅಕ್ಕಪಕ್ಕದಲ್ಲಿರುವ ಮನೆಗಳನ್ನು ದೇಶ ವಿರೋಧಿ ಚಟುವಟಿಕೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿ ಧ್ವಂಸಗೊಳಿಸಲಾಗಿದೆ.
ಇದು ಈಶಾನ್ಯ ರಾಜ್ಯದಲ್ಲಿ ನೆಲಸಮಗೊಳಿಸಿದ ನಾಲ್ಕನೇ ಮದರಸಾ ಎಂದು ತಿಳಿದು ಬಂದಿದೆ.