Home ಟಾಪ್ ಸುದ್ದಿಗಳು ರಾಹುಲ್ ಗಾಂಧಿಯನ್ನು ಜಿನ್ನಾ ಗೆ ಹೋಲಿಕೆ ಮಾಡಿದ ಅಸ್ಸಾಂ ಮುಖ್ಯಮಂತ್ರಿ !

ರಾಹುಲ್ ಗಾಂಧಿಯನ್ನು ಜಿನ್ನಾ ಗೆ ಹೋಲಿಕೆ ಮಾಡಿದ ಅಸ್ಸಾಂ ಮುಖ್ಯಮಂತ್ರಿ !

ಡೆಹ್ರಾಡೂನ್: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಧುನಿಕ ದಿನದ ಜಿನ್ನಾ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಪಾಕಿಸ್ತಾನದ ವಿರುದ್ಧ  ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿರುವುದಕ್ಕೆ ಪುರಾವೆ ಕೇಳುತ್ತಾರೆ. ಆದರೆ ನಾವೆಂದೂ ನೀವು ನಿಜವಾಗಿಯೂ ರಾಜೀವ್ ಗಾಂಧಿಯ ಮಗ ರಾಹುಲ್ ಗಾಂಧಿ ಹೌದಾ ಅಥವಾ ಅಲ್ಲವೇ ಎಂದು ಕೇಳಿದ್ದೇವೆಯೇ ಎಂದು ವಿವಾದಿತ ಕೀಳುಮಟ್ಟದ  ಹೇಳಿಕೆಯನ್ನು ನೀಡಿದ್ದಾರೆ.

ಅಸ್ಸಾಂನಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ವಿರುದ್ಧ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ಭಾರತವೆಂದರೆ ಗುಜರಾತ್‍ನಿಂದ ಪಶ್ಚಿಮ ಬಂಗಾಳದವರೆಗೆ ಮಾತ್ರ. ಕಳೆದ ಹತ್ತು ದಿನಗಳಿಂದ ಅವರು ಹೇಳುತ್ತಿರುವುದನ್ನು ಗಮನಿಸುತ್ತಿದ್ದೇನೆ. ಒಮ್ಮೆ ಅವರು ಭಾರತವು ರಾಜ್ಯಗಳ ಒಕ್ಕೂಟವಾಗಿದೆ. ಇನ್ನೊಂದು ಬಾರಿ ಭಾರತ ಎಂದರೆ ಗುಜರಾತಿನಿಂದ ಬಂಗಾಳದವರೆಗೆ ಎನ್ನುತ್ತಾರೆ. ಹೀಗಾಗಿ ರಾಹುಲ್ ಗಾಂಧಿಯಲ್ಲಿ ಜಿನ್ನಾ ದೆವ್ವ ಪ್ರವೇಶಿಸಿದೆ ಎಂದು ನಾನು ಹೇಳುತ್ತಿದ್ದೇನೆ ಎಂದಿದ್ದಾರೆ.

Join Whatsapp
Exit mobile version