Home ಟಾಪ್ ಸುದ್ದಿಗಳು ಏಷ್ಯಾ ಸ್ಕ್ವಾಶ್ ಚಾಂಪಿಯನ್‌ ಶಿಪ್‌ : ಭಾರತಕ್ಕೆ ಚಿನ್ನ

ಏಷ್ಯಾ ಸ್ಕ್ವಾಶ್ ಚಾಂಪಿಯನ್‌ ಶಿಪ್‌ : ಭಾರತಕ್ಕೆ ಚಿನ್ನ

ದಕ್ಷಿಣ ಕೊರಿಯಾದದಲ್ಲಿ ನಡೆದ ಏಷ್ಯಾ ಸ್ಕ್ವಾಶ್ ಚಾಂಪಿಯನ್‌ ಶಿಪ್‌ನ ಫೈನಲ್‌ನಲ್ಲಿ ಕುವೈತನ್ನು ಮಣಿಸಿದ ಭಾರತದ ಪುರುಷರ ತಂಡವು ಚಿನ್ನ ಗೆದ್ದಿತು. ಹಿಂದಿನೆರಡು ಬಾರಿ ಬೆಳ್ಳಿ ಗೆದ್ದಿದ್ದ ಭಾರತಕ್ಕೆ ಇದು ಮೊದಲ ಚಾರಿತ್ರಿಕ ಬಂಗಾರವಾಗಿದೆ.

ಫೈನಲ್‌ ನಲ್ಲಿ ನಾಯಕ ಸೌರವ್ ಘೋಷಾಲ್ ಮತ್ತು ರಮಿತ್ ಟಂಡನ್ ಗೆದ್ದು ಫಲಿತಾಂಶ ನಿರ್ಣಯವಾದುದರಿಂದ ಅಭಯ ಸಿಂಗ್ ಆಡಬೇಕಿದ್ದ ಮೂರನೇ ಪಂದ್ಯ ರದ್ದುಪಡಿಸಲಾಯಿತು.

ಸೆಮಿಫೈನಲ್‌ ನಲ್ಲಿ ಭಾರತವು ಮಲೇಶಿಯಾ ವಿರುದ್ಧ 2-1 ರಿಂದ ಜಯಿಸಿತು.

ಇದೇ ವೇಳೆ ಮಹಿಳಾ ವಿಭಾಗದಲ್ಲಿ ಭಾರತದ ಮಹಿಳಾ ಸ್ಕ್ವಾಶ್ ತಂಡವು ಸೆಮಿಫೈನಲ್ ನಲ್ಲಿ 1-2 ರಿಂದ ಮಲೇಷ್ಯಾ ಎದುರು ಸೋತು ಕಂಚು ತನ್ನದಾಗಿಸಿಕೊಂಡಿತು.

Join Whatsapp
Exit mobile version