Home ಟಾಪ್ ಸುದ್ದಿಗಳು ಏಶ್ಯನ್ ಚಾಂಪಿಯನ್ಸ್ ಟ್ರೋಫಿ: ಭಾರತ ಹಾಕಿ ತಂಡದಲ್ಲಿ ಕರ್ನಾಟಕದ ಮುಹಮ್ಮದ್‌ ರಾಹೀಲ್‌‌ಗೆ ಸ್ಥಾನ

ಏಶ್ಯನ್ ಚಾಂಪಿಯನ್ಸ್ ಟ್ರೋಫಿ: ಭಾರತ ಹಾಕಿ ತಂಡದಲ್ಲಿ ಕರ್ನಾಟಕದ ಮುಹಮ್ಮದ್‌ ರಾಹೀಲ್‌‌ಗೆ ಸ್ಥಾನ

ನವದೆಹಲಿ: ಏಶ್ಯನ್ ಚಾಂಪಿಯನ್ಸ್ ಟ್ರೋಫಿಗೆ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ 18 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ. ತಂಡದಲ್ಲಿ ಕರ್ನಾಟಕ 28 ವರ್ಷದ ಮುಹಮ್ಮದ್‌ ರಾಹೀಲ್‌ ಮೌಸೀನ್‌ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ರಾಹೀಲ್‌ ಈವರೆಗೆ ಭಾರತದ ಪರ 8 ಪಂದ್ಯಗಳನ್ನಾಡಿದ್ದಾರೆ.

ಹರ್ಮನ್‌ಪ್ರೀತ್‌ ಸಿಂಗ್‌ ನಾಯಕನಾಗಿ ಮುಂದುವರಿಯಲಿದ್ದು, ಉಪನಾಯಕರಾಗಿ ವಿವೇಕ್‌ ಸಾಗರ್‌ ಪ್ರಸಾದ್‌ ಕಾರ್ಯನಿರ್ವಹಿಸಲಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ ಆಡಿದ 10 ಆಟಗಾರರು ತಂಡಕ್ಕೆ ಆಯ್ಕೆಯಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ನಿವೃತ್ತಿಯಾಗಿರುವ ಪಿ.ಆರ್. ಶ್ರೀಜೇಶ್‌ರಿಂದ ತೆರವಾಗಿರುವ ಮುಖ್ಯ ಗೋಲ್‌ಕೀಪರ್ ಸ್ಥಾನವನ್ನು ಕೃಷ್ಣ ಬಹದ್ದೂರ್ ಪಾಠಕ್‌‌ಗೆ ನೀಡಲಾಗಿದೆ.

Join Whatsapp
Exit mobile version