Home ಕರಾವಳಿ ನೇಣು ಬಿಗಿದ ಸ್ಥಿತಿಯಲ್ಲಿ ಎಎಸ್ ಐ ಅಬ್ದುಲ್ ಅನೀಸ್ ಶವ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಎಎಸ್ ಐ ಅಬ್ದುಲ್ ಅನೀಸ್ ಶವ ಪತ್ತೆ

ಕಾಸರಗೋಡು :  ನೇಣು ಬಿಗಿದ ಸ್ಥಿತಿಯಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ಅಬ್ದುಲ್ ಅನೀಸ್ (48)  ಎಂಬವರ ಮೃತದೇಹ ಅವರ ನಿವಾಸದಲ್ಲಿ ಪತ್ತೆಯಾಗಿದೆ. 

ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಸಂಬಂಧಿಕರು, ಅನೀಸ್ ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದರೆಂದು ತಿಳಿದುಬಂದಿದೆ.

ಈ ಹಿಂದೆ ವೆಳ್ಳರಿಕುಂಡು, ರಾಜಪುರಂ ಸಹಿತ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಎಎಸ್ ಐಯಾಗಿ ಭಡ್ತಿ ಹೊಂದಿ ಸ್ಪೆಷಲ್ ಬ್ರಾಂಚಿಗೆ ವರ್ಗಾವಣೆಗೊಂಡಿದ್ದರು. ಮುಹಮ್ಮದ್ ಹಲೀಮಾ ದಂಪತಿ ಪುತ್ರರಾದ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Join Whatsapp
Exit mobile version