Home ಟಾಪ್ ಸುದ್ದಿಗಳು ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ ಅಸಾದುದ್ದೀನ್ ಉವೈಸಿ

ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ ಅಸಾದುದ್ದೀನ್ ಉವೈಸಿ

►ಬಾಂಬ್ ಸ್ಫೋಟ ಘಟನೆ ಭಾರತೀಯ ಮೌಲ್ಯಗಳ ಮೇಲಿನ ಆಕ್ರಮಣ ಎಂದ ಸಂಸದ

ಹೈದರಾಬಾದ್: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಘಟನೆಯನ್ನು ಸಂಸದ ಅಸಾದುದ್ದೀನ್ ಉವೈಸಿ ಹೇಡಿತನದ ಕೃತ್ಯ ಎಂದು ಹೇಳಿ ಖಂಡಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೆಫೆ ಮೇಲಿನ ದಾಳಿಯು ಹೇಡಿತನದ ಕೃತ್ಯವಾಗಿದೆ. ಮತ್ತು ಭಾರತೀಯ ಮೌಲ್ಯದ ಮೇಲಿನ ಆಕ್ರಮಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್​ನಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ರಾಮೇಶ್ವರಂ ಕೆಫೆ ಹೋಟೆಲ್​ಗೆ ಭೇಟಿ ನೀಡಿ ಬಂದ ನಂತರ ಉವೈಸಿ ಈ ಟ್ವೀಟ್ ಮಾಡಿದ್ದಾರೆ.

‘ಹೈದರಾಬಾದ್​ನ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದೆ. ಆಹಾರ ಅಮೋಘವಾಗಿತ್ತು. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮಸ್ಥಳದ ಹೆಸರನ್ನು ಈ ಕೆಫೆಗೆ ಇಡಲಾಗಿದೆ. ಇದನ್ನು ಬಹಳ ಮುಖ್ಯವಾಗಿ ಗಮನಿಸಬೇಕು. ಈ ಬಾಂಬ್ ಬ್ಲಾಸ್ಟ್ ಭಾರತೀಯ ಮೌಲ್ಯಗಳ ಮೇಲೆ ಆದ ದಾಳಿ,’ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥರೂ ಆದ ಅವರು ಹೇಳಿದ್ದಾರೆ.

Join Whatsapp
Exit mobile version