ಜಾತಿ ಆಧಾರಿತ ಜನಗಣತಿ, ಒಬಿಸಿ ಉಪ ವರ್ಗೀಕರಣಕ್ಕೆ ಸಂಪೂರ್ಣ ಬೆಂಬಲವಿದೆ : ಅಸದುದ್ದೀನ್ ಒವೈಸಿ

Prasthutha|

ಹೈದರಾಬಾದ್: ಎ.ಐ.ಎಮ್.ಐ.ಎಮ್ ಮುಖ್ಯಸ್ಥ ಹಾಗೂ ಸಂಸದ ಅಸದುದ್ದೀನ್ ಒವೈಸಿ ಅವರು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತ ಜಾತಿ ಆಧಾರಿತ ಜನಗಣತಿ ಮತ್ತು ಹಿಂದುಳಿದ ವರ್ಗಗಳ ಉಪ- ವರ್ಗೀಕರಣವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಜಾತಿ ಆಧಾರಿತ ಜನಗಣತಿಯು ದೇಶದ ಜನರಿಗೆ, ಅದರಲ್ಲೂ ವಿಶೇಷವಾಗಿ ಹಿಂದುಳಿದ ವರ್ಗದ ಜಾತಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಅದೇ ರೀತಿ ಪ್ರತಿಯೊಂದು ರಾಜಕೀಯ ಪಕ್ಷವೂ ಕೂಡ ಜಾತಿ ಆಧಾರಿತ ಜನಗಣತಿಯನ್ನು ಬಯಸುತ್ತಿದೆಯೆಂದು ಅವರು ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು.

- Advertisement -

ನಿನ್ನೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ 10 ಪಕ್ಷಗಳ ನಿಯೋಗ ಜಾತಿ ಆಧಾರಿತ ಜನಗಣತಿಯ ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ದೆಹಲಿಯಲ್ಲಿ ಸಭೆ ನಡೆಸಿತ್ತು. ಒಂದು ನಿರ್ದಿಷ್ಟ ಜಾತಿಯ ಜನಸಂಖ್ಯೆಯ ಉನ್ನತಿ ಮತ್ತು ಸಬಲೀಕರಣವು ಜನಗಣತಿಯ ಆಧಾರದಲ್ಲಿ ನಿರ್ದರಿಸಲಾಗುತ್ತದೆ. ಒಬಿಸಿಯ ಉಪ- ವರ್ಗೀಕರಣವು ಸಬಲೀಕರಣದಲ್ಲಿ ಮುಖ್ಯಪಾತ್ರ ವಹಿಸುತ್ತದೆಯೆಂದು ಅವರು ತಿಳಿಸಿದರು.

ಜೊತೆಗೆ, ಅಫ್ಘಾನಿಸ್ತಾನದ ಬಿಕ್ಕಟ್ಟಿನ ಕುರಿತು ಮಹತ್ವದ ವಿಷಯವನ್ನು ಚರ್ಚಿಸುವ ನಿಟ್ಟಿನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕರೆದಿರುವ ಸರ್ವಪಕ್ಷಗಳ ಸಭೆಗೆ ತಮ್ಮ ಪಕ್ಷವನ್ನು ಅಹ್ವಾನಿಸಬೇಕೆಂದು ಒವೈಸಿ ಅವರು ಈ ಸಂದರ್ಭದಲ್ಲಿ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದರು.



Join Whatsapp