Home ಟಾಪ್ ಸುದ್ದಿಗಳು ವಿರೋಧ ಪಕ್ಷದ ನಾಯಕರಾಗಿ ಆರ್. ಅಶೋಕ್ ಹೆಸರು ಫೈನಲ್?

ವಿರೋಧ ಪಕ್ಷದ ನಾಯಕರಾಗಿ ಆರ್. ಅಶೋಕ್ ಹೆಸರು ಫೈನಲ್?

ಬೆಂಗಳೂರು: ವಿರೋಧ ಪಕ್ಷದ ನಾಯಕನ ಆಯ್ಕೆಗೆ ಕೇಂದ್ರದಿಂದ ಹೈಕಮಾಂಡ್ ವೀಕ್ಷಕರಾಗಿ ನಿರ್ಮಲ ಸೀತಾರಾಮನ್ ಹಾಗೂ ದುಶ್ಶಾಂತ್ ಕುಮಾರ್ ರಾಜ್ಯಕ್ಕೆ ಆಗಮಿಸಿದ್ದು, ಆಯ್ಕೆಗೆ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸುವ ಸಲುವಾಗಿ ಇಂದು ಬೆಂಗಳೂರಿನ ಐಟಿಸಿ ಹೋಟೆಲ್ ನಲ್ಲಿ ಬಿ ಎಲ್ ಪಿ ಸಭೆ ನಡೆಸಿದ್ದಾರೆ.

ಇದೀಗ ಮಾಜಿ ಸಚಿವ ಆರ್. ಅಶೋಕ್ ಅವರನ್ನು ವಿಪಕ್ಷ ನಾಯಕರನ್ನಾಗಿ ನೇಮಕ ಮಾಡಿ ಅಂತಿಮಗೊಳಿಸಲಾಗಿದೆ ಎಂಬ ಮಾಹಿತಿ ಸಿಗುತ್ತಿದೆ. ಲಿಂಗಾಯತ ಸಮುದಾಯದವನ್ನು ಓಲೈಸಲು ಬಿ ವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಇದೀಗ ಒಕ್ಕಲಿಗರನ್ನು ಸೆಳೆಯಲು ಆರ್. ಅಶೋಕ್ ಹೆಸರು ಬಹುತೇಕವಾಗಿ ಅಂತಿಮವಾಗಿದೆ ಎನ್ನಲಾಗುತ್ತಿದೆ.

Join Whatsapp
Exit mobile version