ಸೂಟ್ ಕೇಸ್ ಕೊಂಡುಹೋಗಲು ಆಗಮಿಸಿದ ಅರುಣ್ ಸಿಂಗ್: ಕುಮಾರಸ್ವಾಮಿ ಆರೋಪ

Prasthutha|

ಮೈಸೂರು: ರಾಜ್ಯಕ್ಕೆ ‘ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬಂದಿದ್ದು ಹಣ ಸಂಗ್ರಹಕ್ಕೆ ಮಾತ್ರ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.


ಅವರು ಬಂದು ಕೇವಲ ಸೂಟ್ ಕೇಸ್ ತೆಗೆದುಕೊಂಡರೆ ಹೋದರೆ ಸಾಲದು. ರಾಜ್ಯದ ಯೋಜನೆಗಳ ಕುರಿತೂ ಮಾತನಾಡಬೇಕು. ಜೆಡಿಎಸ್ ಪಕ್ಷವನ್ನು ಮುಳುಗುವ ಹಡಗು ಎಂದು ಲಘುವಾಗಿ ಹೇಳಿದ್ದಾರೆ. ಆದರೆ, ಜೆಡಿಎಸ್ ನ ‘ಫ್ಯೂಸ್’ ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಕೇಂದ್ರದಿಂದ ಬರುವ ಇಂತಹ ದಲ್ಲಾಳಿಗಳಿಗೆ ರಾಜ್ಯದ ನಾಯಕರು ವಾಸ್ತವ ಸ್ಥಿತಿಯನ್ನು ಮನದಟ್ಟು ಮಾಡಿಸಬೇಕು’ ಎಂದು ಹೇಳಿದರು.

- Advertisement -


ಮೇಕೆದಾಟು ಯೋಜನೆ ಸೇರಿದಂತೆ ಬಹುತೇಕ ಯೋಜನೆಗಳನ್ನು ಜಾರಿಗೊಳಿಸದ ರಾಜ್ಯ ಸರ್ಕಾರದ ಸಚಿವರಿಗೆ ಮೂಳೆಗಳೇ ಇಲ್ಲ. ಎಂಜಿನ್ ಕೆಟ್ಟಿತೆಂದು ನಾಯಕತ್ವ ಬದಲಾವಣೆ ಮೂಲಕ ಮತ್ತೊಂದು ಎಂಜಿನ್ ಜೋಡಿಸಿದ್ದಾರೆ. ಆದರೆ, ಬೋಗಿಗಳೆಲ್ಲ ಕೊಳೆತಿವೆ. ಇಂತಹವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಟೀಕಿಸಿದರು.

- Advertisement -