ನವದೆಹಲಿ: ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರು ಸೋಮವಾರ ಭಾರತದ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.
ಗೋಯೆಲ್, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರನ್ನೊಳಗೊಂಡ ಚುನಾವಣಾ ಆಯೋಗದ ತ್ರಿಸದಸ್ಯರಲ್ಲಿ ಒಬ್ಬರಾಗಿದ್ದಾರೆ.
ಕಾನೂನು ಮತ್ತು ನ್ಯಾಯ ಸಚಿವಾಲಯವು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರ್ದೇಶನದಂತೆ ಐಎಎಸ್ ಅಧಿಕಾರಿ ಅರುಣ್ ಗೋಯೆಲ್ ಅವರನ್ನು ಶನಿವಾರ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿತ್ತು.
ತ್ರಿಸದಸ್ಯ ಚುನಾವಣಾ ಆಯೋಗದಲ್ಲಿ ಸುಶೀಲ್ ಚಂದ್ರ ಅವರು ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ನಿವೃತ್ತರಾದ ನಂತರ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯುಕ್ತರ ಹುದ್ದೆಯು ಮೇ 15 ರಿಂದ ಖಾಲಿಯಾಗಿತ್ತು. ಇದೀಗ ರಾಜೀವ್ ಕುಮಾರ್ ಅವರು ತೆರವಾಗಿರುವ ಸ್ಥಾನಕ್ಕೆ ಗೋಯೆಲ್ ನೇಮಕವಾಗಿದ್ದಾರೆ.