Home ಟಾಪ್ ಸುದ್ದಿಗಳು ಕಲಾವಿದರ ದತ್ತಾಂಶ ಸಂಗ್ರಹ ಅಭಿಯಾನ: ಸಚಿವ ಸುನಿಲ್ ಕುಮಾರ್

ಕಲಾವಿದರ ದತ್ತಾಂಶ ಸಂಗ್ರಹ ಅಭಿಯಾನ: ಸಚಿವ ಸುನಿಲ್ ಕುಮಾರ್

ಬೆಂಗಳೂರು; ರಾಜ್ಯದಲ್ಲಿನ ಕಲಾವಿದರ ದತ್ತಾಂಶ ಸಂಗ್ರಹ ಕಾರ್ಯ ಅಭಿಯಾನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಗೆತ್ತಿಕೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಬೆಂಗಳೂರಿನಲ್ಲಿಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಚಿವರು, ಕಲಾವಿದರು, ಸಾಹಿತಿಗಳ ಹೆಸರು, ವಿಳಾಸ, ವಯಸ್ಸು, ಕಲಾ ಪ್ರಕಾರದಲ್ಲಿ ಸಲ್ಲಿಸಿರುವ ಸೇವಾ ಅವಧಿ, ಮಾಡಿರುವ ಸಾಧನೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ದತ್ತಾಂಶ ರೂಪದಲ್ಲಿ ಸಂಗ್ರಹ ಮಾಡುವ ಮಹತ್ವ ಪೂರ್ಣ ಯೋಜನೆ ಇದಾಗಿದೆ ಎಂದರು. ಸೇವಾ ಸಿಂಧು ವೆಬ್ ಪೋರ್ಟಲ್ ಮುಖಾಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಹಿತಿ, ಕಲಾವಿದರ ಸಂಗ್ರಹ ವಿಭಾಗಕ್ಕೆ ಭೇಟಿ ಮಾಡಿ, ನಿಗದಿತ ನಮೂನೆಯಲ್ಲಿ ಅಗತ್ಯ ಮಾಹಿತಿ ಹಾಗೂ ವಿವರಗಳನ್ನು ಭರ್ತಿ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ, ನಯನ ರಂಗಮಂದಿರ, ಕಲಾಗ್ರಾಮ ಮತ್ತು ಇತರ ರಂಗಮಂದಿರಗಳನ್ನು ಕಾರ್ಯಕ್ರಮಗಳಿಗಾಗಿ ಕಾಯ್ದಿರಿಸಲು ಪಾರದರ್ಶಕ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.

Join Whatsapp
Exit mobile version