Home ಟಾಪ್ ಸುದ್ದಿಗಳು 370 ವಿಧಿ ಮರು ಸ್ಥಾಪಿಸಲಾಗಲ್ಲ, ಪೊಳ್ಳು ಭರವಸೆ ನೀಡಿ ಜನರನ್ನು ದಾರಿತಪ್ಪಿಸಬೇಡಿ: ಆಜಾದ್

370 ವಿಧಿ ಮರು ಸ್ಥಾಪಿಸಲಾಗಲ್ಲ, ಪೊಳ್ಳು ಭರವಸೆ ನೀಡಿ ಜನರನ್ನು ದಾರಿತಪ್ಪಿಸಬೇಡಿ: ಆಜಾದ್

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಇನ್ನು ಮುಂದೆ ಎಂದಿಗೂ ವಾಪಸ್ ಸಿಗುವುದಿಲ್ಲ. ಆ ಸ್ಥಾನಮಾನ ಮತ್ತೆ ತಂದು ಕೊಡುತ್ತೇನೆ ಎಂಬ ಪೊಳ್ಳು ಭರವಸೆಯನ್ನು ನಾನು ನೀಡುವುದಿಲ್ಲ ಎಂದು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಹೇಳಿದ್ದಾರೆ.


ಬಾರಾಮುಲ್ಲಾದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಿದ ಮತ್ತು 2 ವರ್ಷಗಳ ಹಿಂದೆ ಹಿಂತೆಗೆದುಕೊಳ್ಳಲಾದ ಸಂವಿಧಾನದ 370 ನೇ ವಿಧಿಯನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ. 370 ನೇ ವಿಧಿಯನ್ನು ವಾಪಸ್ ತರುವ ಕುರಿತು ಪೊಳ್ಳು ಭರವಸೆ ನೀಡುವುದಿಲ್ಲ. ಬೇರೆ ಯಾವುದೇ ರಾಜಕೀಯ ಪಕ್ಷಗಳು ಇದನ್ನು ಹೇಳಿದರೆ ನಂಬಬೇಡಿ ಎಂದು ಹೇಳಿದ್ದಾರೆ.

Join Whatsapp
Exit mobile version