ದುಬೈಯಿಂದ ಮಂಗಳೂರಿಗೆ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನ | ಓರ್ವನ ಬಂಧನ

Prasthutha|

ಮಂಗಳೂರು:  ದುಬೈಯಿಂದ ಮಂಗಳೂರಿಗೆ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ ಯುವಕನನ್ನು ಕಸ್ಟಮ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಯುವಕನನ್ನು ಬಂಟ್ವಾಳ ಮೂಲದ ಅರಿಶ್ ಎಂದು ಗುರುತಿಸಲಾಗಿದೆ.

- Advertisement -

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಕಸ್ಟಮ್ ಅಧಿಕಾರಿಗಳು 14.55 ಲಕ್ಷ ಮೌಲ್ಯದ 300 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ದುಬೈ ನಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಬಂದ ಆರೋಪಿ ಆಟದ ಸಾಮಾಗ್ರಿ, ಟ್ರಿಮ್ಮರ್, ನೀರಿನ ಡಿಸ್ಪೆಸರ್ ಮತ್ತು ಜ್ಯೂಸರ್ ಮೂಲಕ ಅಕ್ರಮವಾಗಿ ಚಿನ್ನ ಸಾಗಟಕ್ಕೆ ಯತ್ನ ನಡೆಸಿದ್ದ ಎಂದು ತಿಳಿದುಬಂದಿದೆ.

Join Whatsapp