Home ಕರಾವಳಿ ಮದುಮಗನಿಗೆ ಕೊರಗನ ವೇಷ ಧರಿಸಿದ ಪ್ರಕರಣ: ಇಬ್ಬರ ಬಂಧನ

ಮದುಮಗನಿಗೆ ಕೊರಗನ ವೇಷ ಧರಿಸಿದ ಪ್ರಕರಣ: ಇಬ್ಬರ ಬಂಧನ

ಬಂಟ್ವಾಳ: ಮದುಮಗನಿಗೆ ಕೊರಗನ ವೇಷ ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಟ್ಲ ಠಾಣಾ ವ್ಯಾಪ್ತಿಯ ಸಾಲೆತ್ತೂರು ಎಂಬಲ್ಲಿ ಅನ್ಯ ಧರ್ಮದ ಮದುವೆ ಮನೆಯಲ್ಲಿ ಹಿಂದೂಗಳ ಆರಾಧ್ಯ ದೈವ ಸ್ವಾಮೀ ಕೊರಗಜ್ಜನ ವೇಷವನ್ನು ವರನು ಧರಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ .

ಮಂಗಲ್ಪಡಿ ನಿವಾಸಿ , ಪುತ್ತೂರು ಫಾತಿಮಾ ಅಂಗಡಿಯ ಮಾಲಕ ಅಹ್ಮದ್ ಮುಜಿತಾಬು ( 28 ) ಮತ್ತು ಬಾಯಾರು ಪದವು ನಿವಾಸಿ ಮೊಯ್ದಿನ್ ಮುನಿಶ್ ( 19 ) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಮಂಗಳವಾರ ಹಿ.ಜಾ.ವೇ ವಿಟ್ಲ ಬಂದ್ ಗೆ ಕರೆ ನೀಡಿದ್ದು , ಇದರ ಬೆನ್ನಲ್ಲೇ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Join Whatsapp
Exit mobile version