ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Prasthutha|

ಪುತ್ತೂರು: ಎರಡು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಭೂಗತವಾಗಿದ್ದ ಹಳೇ ಆರೋಪಿಯನ್ನು ಪೊಲೀಸರು ಇಂದು(ಜು.23 ಶುಕ್ರವಾರ) ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಕೆದಿಲಾ ಗ್ರಾಮದ ಗಡಿಯಾರ ನಿವಾಸಿಯಾದ ಮೊಹಮ್ಮದ್ ಎಂಬವರ ಮಗನಾದ ಮಜೀದ್ (45) ಅವರು ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದರು ಮತ್ತು  ಕಳೆದ ಎರಡು ವರ್ಷಗಳಿಂದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು.

- Advertisement -

ಆರೋಪಿಯ ಮಾಹಿತಿ ಕಲೆಹಾಕಿದ ಪೊಲೀಸರು ಈ ಹಿಂದೆ ಬೆಂಗಳೂರು, ಕೋಲಾರದಲ್ಲಿ ನೆಲೆಸಿದ್ದ ಮತ್ತು ಪ್ರಸ್ತುತ ಮೂರು ತಿಂಗಳಿನಿಂದ ಗೂಡಿನಬಳಿಯಲ್ಲಿ ವಾಸಿಸುತ್ತಿದ್ದಾರೆಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಪುತ್ತೂರು ನಗರ ಪೊಲೀಸ್ ಠಾಣೆ ಹೆಡ್ ಕಾನ್ ಸ್ಟೇಬಲ್ ಗಳಾದ ಪರಮೇಶ್ವರ ಮತ್ತು ಸುರೇಶ್ ಅವರು ಆರೋಪಿ ಮಜೀದ್ ಅನ್ನು ಬಂಧಿಸಿದ್ದಾರೆ. ಆರೋಪಿಯನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪುತ್ತೂರು ವಿಭಾಗದ ಡಿ.ವೈ.ಎಸ್ಪಿ, ಜಿಲ್ಲಾ ಎಸ್.ಪಿ ಮತ್ತು ಹೆಚ್ಚುವರಿ ಎಸ್.ಪಿ ಯವರ ಸೂಚನೆಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಯಿತು.

- Advertisement -