ನವದೆಹಲಿ: ಬಿಹಾರದ ಆಭರಣ ಮಳಿಗೆಯೊಂದಕ್ಕೆ ಶಸ್ತ್ರಸಜ್ಜಿತ ದರೋಡೆಕೋರರು ದಾಳಿ ನಡೆಸಿ ಮಾಲಕನನ್ನು ಗುಂಡಿಕ್ಕಿ ಹತ್ಯೆ ನಡೆಸಿರುವ ಘಟನೆ ಬಿಹಾರದ ಹಾಜಿಪುರದಲ್ಲಿ ಜೂನ್ 22 ರಂದು ನಡೆದಿದೆ.
ಹಾಜಿಪುರದ ಹೃದಯ ಭಾಗದಲ್ಲಿರುವ ಸುಭಾಷ್ ಮತ್ತು ಮದಾಯಿ ಜಂಕ್ಷನ್’ನ ಮಧ್ಯದಲ್ಲಿರುವ ನೀಲಂ ಜ್ಯುವೆಲ್ಲರಿಗೆ ಐವರು ಶಸ್ತ್ರಸಜ್ಜಿತ ದರೋಡೆಕೋರರು ಬಂದಿದ್ದು, ಮಾಲಕನ ಕೊಲೆ ಬಳಿಕ ದರೋಡೆಕೋರರು ಚಿನ್ನಾಭರಣಗಳನ್ನು ಕಳವುಗೈದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಳಿಗೆಗೆ ಬಂದ ದರೋಡೆಕೋರರು ಗ್ರಾಹಕರಿಗೆ ಕಿರುಕುಳ ನೀಡಲಾರಂಭಿಸಿದ್ದಾರೆ. ಇದನ್ನು ವಿರೋಧಿಸಿದ ಅಂಗಡಿ ಮಾಲಕ ಸುನಿಲ್ ಪ್ರಿಯದರ್ಶಿ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ ಬಳಿಕ ಅವರಿಗೆ ಗುಂಡು ಹೊಡೆದು ಕೊಂದಿದ್ದಾರೆ.
ಘಟನೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆಗೆ ಆದೇಶಿಸಿದ್ದು, ಜ್ಯುವೆಲ್ಲರಿ ಶಾಪ್ ಇರುವ ಪ್ರದೇಶ ಮತ್ತು ಸುತ್ತಮುತ್ತಲು ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ.