Home ಟಾಪ್ ಸುದ್ದಿಗಳು ವಾದಗಳು ಇಂಗ್ಲಿಷ್ ಭಾಷೆಯಲ್ಲಿ ನಡೆಸುವುದು ನ್ಯಾಯಾಲಯ ಮತ್ತು ಜನರ ನಡುವೆ ಅಂತರವನ್ನು ಸೃಷ್ಟಿಸುತ್ತದೆ: ಸಿಜೆಐ ರಮಣ

ವಾದಗಳು ಇಂಗ್ಲಿಷ್ ಭಾಷೆಯಲ್ಲಿ ನಡೆಸುವುದು ನ್ಯಾಯಾಲಯ ಮತ್ತು ಜನರ ನಡುವೆ ಅಂತರವನ್ನು ಸೃಷ್ಟಿಸುತ್ತದೆ: ಸಿಜೆಐ ರಮಣ

ಬೆಂಗಳೂರು: ಭಾರತದ ಇಂದಿನ ವಿದ್ಯಮಾನಕ್ಕೆ ತಕ್ಕಂತೆ ಕಾನೂನು ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ವಾದಗಳು ಇಂಗ್ಲಿಷ್ ಭಾಷೆಯಲ್ಲಿ ನಡೆಸುವುದು ನ್ಯಾಯಾಲಯ ಮತ್ತು ಜನರ ನಡುವೆ ಅಂತರವನ್ನು ಸೃಷ್ಟಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕರ್ನಾಟಕ ವಕೀಲರ ಸಂಘವು ಆಯೋಜಿಸಿದ್ದ ನ್ಯಾಯಮೂರ್ತಿ ಮೋಹನ್ ಎಂ.ಶಾಂತನು ಗೌಡರ ಸ್ಮರಣಾರ್ಥ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು ವಸಾಹತು ಕಾನೂನನ್ನು ಆಧರಿಸಿದ ಪ್ರಸ್ತುತ ವ್ಯವಸ್ಥೆ ದೇಶದ ಅಗತ್ಯಗಳಿಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ವಾದಗಳು ಇಂಗ್ಲಿಷ್ ನಲ್ಲಿ ನಡೆಸುವುದು ನ್ಯಾಯಾಲಯ ಮತ್ತು ಜನರ ನಡುವೆ ಅಂತರವನ್ನು ಸೃಷ್ಟಿಸುತ್ತದೆ. ಅವರವರ ಭಾಷೆಗೆ ಅನುಗುಣವಾಗಿ ವಾದ ನಡೆಸಬೇಕು ಎಂದು ಅವರು ಹೇಳಿದರು. ಇದು ನ್ಯಾಯಾಂಗವನ್ನು ಪಾರದರ್ಶಕವಾಗಿಸುತ್ತದೆ. ಜನರು ನ್ಯಾಯಾಲಯ ಮತ್ತು ನ್ಯಾಯಾಧೀಶರಿಗೆ ಹೆದರದೆ ಸತ್ಯವನ್ನು ಹೇಳುವ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದರು.

Join Whatsapp
Exit mobile version