Home ಟಾಪ್ ಸುದ್ದಿಗಳು ತಾಯ್ನಾಡಿಗೆ ಮರಳಿದ ಅರ್ಜೆಂಟಿನಾ ತಂಡಕ್ಕೆ  ಅದ್ಧೂರಿ ಸ್ವಾಗತ

ತಾಯ್ನಾಡಿಗೆ ಮರಳಿದ ಅರ್ಜೆಂಟಿನಾ ತಂಡಕ್ಕೆ  ಅದ್ಧೂರಿ ಸ್ವಾಗತ

ಬ್ಯೂನಸ್ ಐರಿಸ್‌: ಕತಾರ್‌ನಲ್ಲಿ ಫಿಫಾ ವಿಶ್ವಕಪ್‌ ಗೆದ್ದು ತಾಯ್ನಾಡಿಗೆ ಮರಳಿದ ಅರ್ಜೆಂಟಿನಾ ತಂಡಕ್ಕೆ  ರಾತ್ರಿ ಅದ್ಧೂರಿ ಸ್ವಾಗತ ದೊರಕಿದೆ.

ತೆರೆದ ಬಸ್‌ನಲ್ಲಿ ಆಟಗಾರರು, ಕೋಚ್‌ ಲಯೊನೆಲ್‌ ಸ್ಕಲೋನಿ ಹಾಗೂ ಸಹಾಯಕ ಸಿಬ್ಬಂದಿ ಮೆರವಣಿಗೆಯ ಮೂಲಕ ಮುಖ್ಯ ರಸ್ತೆಗಳಲ್ಲಿ ಸಾಗಿದ್ದರು. ಈ ವೇಳೆ ಚಾಂಪಿಯನ್ನರನ್ನು ಸ್ವಾಗತಿಸಲು ಕಿಲೋ ಮೀಟರ್​ಗಳಷ್ಟು ದೂರದಲ್ಲಿ ಜನೋಸ್ತೋಮವೇ ನೆರೆದಿತ್ತು. ಆದರೆ ಜನರ ನೂಕುನುಗ್ಗಲಿನಿಂದಾಗಿ ಟ್ರೋಫಿ ಪರೇಡ್‌ ಅನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿದೆ.

ವಿಶ್ವಕಪ್‌ ಟ್ರೋಫಿ ಮತ್ತು ಚಾಂಪಿಯನ್ನರನ್ನು ಕಣ್ತುಂಬಿಕೊಳ್ಳಲು ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿ ಸುಮಾರು ಐವತ್ತು ಲಕ್ಷಕ್ಕೂ ಅಧಿಕ ಮಂದಿ ಜಮಾಯಿಸಿದ್ದರು. ಜನ ಪ್ರವಾಹದ ನಡುವೆಯೇ ತೆರೆದ ಬಸ್‌ನಲ್ಲಿ ಆಟಗಾರರು ಒಂದಷ್ಟು ದೂರ ಕ್ರಮಿಸಿದರಾದರೂ, ಆ ಬಳಿಕ ಮುಂದೆ ಹೋಗುವುದು ಅಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಕೈಮೀರಿ ಹೋಗಬಹುದು ಎಂದು ಅಂದಾಜಿಸಿದ ಪೊಲೀಸರು, ಮೆಸ್ಸಿ ಮತ್ತು ಸಂಗಡಿಗರನ್ನು ಹೆಲಿಕಾಪ್ಟರ್‌ ಮೂಲಕ ಸುರಕ್ಷಿತವಾಗಿ ʻಏರ್‌ ಲಿಫ್ಟ್‌ʼ ಮಾಡಿದ್ದಾರೆ. ರಾಷ್ಟ್ರ ರಾಜಧಾನಿಯ ಸುತ್ತ ವೈಮಾನಿಕ ಮೆರವಣಿಗೆಯ ಬಳಿಕ ಅವರವರ ನಿವಾಸಕ್ಕೆ ಮರಳಿದ್ದಾರೆ.

ಪೂರ್ವ ನಿಗದಿತ ದಾರಿಯಲ್ಲಿ ಜನರು ಕಿಕ್ಕಿರಿದು ಸೇರಿದ್ದ ಕಾರಣ, ಮೆರವಣಿಗೆಯು ಸಾಗಬೇಕಾದ ಮಾರ್ಗವನ್ನು ದಿಢೀರ್‌ ಆಗಿ ಬದಲಿಸಲಾಗಿತ್ತು. ಅದಾಗಿಯೂ ಕೆಲ ಅಭಿಮಾನಿಗಳು ಆಟಗಾರರಿದ್ದ ಬಸ್‌ನತ್ತ ಜಿಗಿಯಲು ಪ್ರಯತ್ನಿಸಿದ್ದು, ಈ ವೇಳೆ ಹಲವರು ಗಾಯಗೊಂಡಿದ್ದಾರೆ.

Join Whatsapp
Exit mobile version