ಹಿಂದುತ್ವವಾದಿಗಳಿಂದ ತೀವ್ರಗೊಂಡ ಹಿಂಸಾಚಾರ । ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಅರಬ್ ಒಕ್ಕೂಟ ಕರೆ

Prasthutha|

ಅಬುಧಾಬಿ: ಭಾರತದಲ್ಲಿ ಮುಸ್ಲಿಮರ ಮೇಲೆ ವ್ಯಾಪಕವಾಗುತ್ತಿರುವ ನಿರಂತರ ದಾಳಿಗಳ ಹಿನ್ನೆಲೆಯಲ್ಲಿ ಅಲ್ಲಿನ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿ ಅರಬ್ ಒಕ್ಕೂಟ ಅಲ್ಲಿನ ನಿವಾಸಿಗಳನ್ನು ಒತ್ತಾಯಿಸಿದೆ.

- Advertisement -

ಅದೇ ರೀತಿ ನೂತನ ಹ್ಯಾಶ್ ಟ್ಯಾಗ್ ಮೂಲಕ ಟ್ವಿಟ್ಟರ್ ಅಭಿಯಾನವನ್ನು ಆರಂಭಿಸಿ ಪ್ರಸಕ್ತ ಈಗ ಟ್ರೆಂಡಿಂಗ್ ಆಗಿದೆ. ಇತ್ತೀಚೆಗೆ ಅಸ್ಸಾಂ ನಲ್ಲಿ ಭೂ ರಹಿತ ಮುಸ್ಲಿಮರ ಮೇಲೆ ಪೊಲೀಸರು ಮತ್ತು ಸರ್ಕಾರಿ ಪ್ರೇರಿತ ಹಿಂಸೆಯನ್ನು ಖಂಡಿಸಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಅರಬ್ ಒಕ್ಕೂಟ ಸ್ಪಷ್ಟಪಡಿಸಿವೆ.

ಇಂಡಿಯಾ ಕಿಲ್ಸ್ ಮುಸ್ಲಿಮ್ ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಸಾಮಾಜಿಕ ಜಾಲಗಳಲ್ಲಿ ಅಭಿಯಾನಗಳನ್ನು ಆರಂಭಿಸಿದೆ. ಈ ಅಭಿಯಾನದಲ್ಲಿ ಅರಬ್ ಜಗತ್ತಿನ ಪ್ರಭಾವಿ ವ್ಯಕ್ತಿಗಳು, ಬುದ್ಧಿಜೀವಿಗಳು, ನಾಯಕರು ಭಾಗವಹಿಸಿ ಗಮನ ಸೆಳೆದಿದ್ದರು.

- Advertisement -

ಮಾತ್ರವಲ್ಲ ಈ ಅಭಿಯಾನ ಅರಬ್ ಜಗತ್ತಿನಲ್ಲಿ ಟ್ರೆಂಡಿಂಗ್ ಆಗಿದ್ದು, ಹಲವಾರು ಬಳಕೆದಾರರು ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಮುಹಿನುಲ್ ಹಕ್ ಪೊಲೀಸರಿಂದ ಕೊಲ್ಲಲ್ಪಡುವ ಮತ್ತು ಆತನ ದೇಹದ ಮೇಲೆ ಕ್ಯಾಮರಾ ಮ್ಯಾನ್ ಒಬ್ಬ ಜಿಗಿದು ವಿಕೃತ ಮೆರೆಯುವ ದೃಶ್ಯ ಜಗತ್ತನ್ನು ತಲ್ಲಣಗೊಳಿಸಿತ್ತು. ಈ ನಿಟ್ಟಿನಲ್ಲಿ ದೇಶದಲ್ಲಿ ಮುಸ್ಲಿಮರ ವಿರುದ್ಧ ಹಿಂದುತ್ವವಾದಿ ಗುಂಪುಗಳು ನಡೆಸುತ್ತಿರುವ ದೌರ್ಜನ್ಯಗಳನ್ನು ಎತ್ತಿ ತೋರಿಸಲಾಗಿದೆ.

ಭಾರತದಲ್ಲಿ ಮುಸ್ಲಿಮರ ವಿರುದ್ಧದ ಹಿಂಸಾಚಾರದ ಕುರಿತು ಆರಂಭವಾದ ಸಾಮಾಜಿಕ ಮಾಧ್ಯಮದ ಅಭಿಯಾನದಲ್ಲಿ ಹಲವು ಅರಬ್ ಪ್ರಭಾವಿ ವ್ಯಕ್ತಿಗಳು, ದೇಶದ ಜನರನ್ನು ಭಾಗವಹಿಸುವಂತೆ ಪ್ರೇರೇಪಿಸುವ ವೀಡಿಯೋ ಅಫ್ಲೋಡ್ ಮಾಡಿದ್ದಾರೆ.

Join Whatsapp