Home ಟಾಪ್ ಸುದ್ದಿಗಳು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆ ಸೇರಿದ ಐತಿಹಾಸಿಕ ಅರಬ್ ಬಾಹ್ಯಾಕಾಶ ನೌಕೆ

ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆ ಸೇರಿದ ಐತಿಹಾಸಿಕ ಅರಬ್ ಬಾಹ್ಯಾಕಾಶ ನೌಕೆ

ದುಬೈ : ಮಂಗಳ ಗ್ರಹದ ಹವಾಮಾನ ರಹಸ್ಯಗಳನ್ನು ಸಂಶೋಧಿಸುವ ನಿಟ್ಟಿನಲ್ಲಿ ಉಡಾವಣೆಗೊಂಡಿರುವ ಪ್ರಪ್ರಥಮ ಯುಎಇಯ ಅಂತರ್ ಗ್ರಹ ಉಪಗ್ರಹ, ಕ್ಷಿಷ್ಟಕರ ಸನ್ನಿವೇಶವನ್ನು ದಾಟಿ, ಮಂಗಳವಾರ ಮಂಗಳ ಗ್ರಹದ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಗೊಂಡಿದೆ.

ಯನೈಟೆಡ್ ಅರಬ್ ಎಮಿರೇಟ್ಸ್ ನ ಮಾನವರಹಿತ ಬಾಹ್ಯಾಕಾಶ ಸಂಶೋಧನಾ ಉಪಗ್ರಹ “ಅಲ್ ಅಮಲ್” (ಭರವಸೆ) ಕಕ್ಷೆ ಸೇರುತ್ತಿದ್ದಂತೆ ದುಬೈಯಲ್ಲಿರುವ ಅಲ್ಲಿನ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಗಳು ಸಂಭ್ರಮಿಸಿದರು. ಸುಮಾರು 27 ನಿಮಿಷಗಳ ಕಾಲ ಈ ಪ್ರಕ್ರಿಯೆ ಜರುಗಿತು. 11 ನಿಮಿಷಗಳ ಉಸಿರು ಬಿಗಿಹಿಡಿಯುವ ಕ್ಷಣಗಳು ಕಳೆದ ಬಳಿಕ, ಭೂಮಿಗೆ ಉಪಗ್ರಹದಿಂದ ಸಿಗ್ನಲ್ ದೊರಕಿದ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಅತ್ಯಂತ ಸಂತೋಷ ವ್ಯಕ್ತಪಡಿಸಿದರು.

ಯುಎಇ ಮಂಗಳ ಗ್ರಹಕ್ಕೆ ಯಶಸ್ವಿಯಾಗಿ ತಲುಪಿದೆ ಎಂಬುದನ್ನು ನಾವು ಯುಎಇ ಮತ್ತು ಅರಬ್ ಹಾಗೂ ಇಸ್ಲಾಮಿಕ್ ರಾಷ್ಟ್ರಗಳ ಜನರಿಗೆ ಘೋಷಿಸುತ್ತಿದ್ದೇವೆ ಎಂದು ಬಾಹ್ಯಾಕಾಶ ಮಿಷನ್ ನ ನಿರ್ದೇಶಕ ಒಮ್ರಾನ್ ಶರಾಫ್ ಹೇಳಿದ್ದಾರೆ.

Join Whatsapp
Exit mobile version