ಬೆಂಗಳೂರು: ಎಸ್ ಐಟಿ ವಶದಲ್ಲಿರುವ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರನ್ನು ಕೆಲವೇ ಹೊತ್ತಿನಲ್ಲೇ ಜಡ್ಜ್ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಕೋರಮಂಗಲದ ಎನ್ ಜಿವಿಯಲ್ಲಿರುವ ಜಡ್ಜ್ ನಿವಾಸದಲ್ಲಿ ಹೆಚ್. ಡಿ. ರೇವಣ್ಣ ಅವರನ್ನು ಹಾಜರುಪಡಿಸಲಾಗುತ್ತದೆ.ಜಡ್ಜ್ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.
ತಡರಾತ್ರಿಯಾವರೆಗೂ ಎಸ್ಐಟಿ ಅಧಿಕಾರಿಗಳು ಹೆಚ್‌ಡಿ ರೇವಣ್ಣರನ್ನು ವಿಚಾರಣೆ ಮಾಡಿದ್ದು, ಕಿಡ್ನ್ಯಾಪ್ಗೂ ನನಗೂ ಸಂಬಂಧವಿಲ್ಲ. ತಾನು ಯಾರಿಗೂ ಕಿಡ್ನ್ಯಾಪ್ ಮಾಡಿ ಎಂದು ಹೇಳಿಲ್ಲ ಎಂದು ಅವರು ಹೇಳಿದ್ದಾರೆ..