Home ಟಾಪ್ ಸುದ್ದಿಗಳು ದಲಿತ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ: ಐಜಿಪಿಗೆ ದಲಿತ ಸಂಘಟನೆಗಳಿಂದ ಮನವಿ

ದಲಿತ ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ: ಐಜಿಪಿಗೆ ದಲಿತ ಸಂಘಟನೆಗಳಿಂದ ಮನವಿ

ಲಿಂಗಸುಗೂರ: ತಾಲೂಕಿನ ಕಿಲಾರಟ್ಟಿ ದಲಿತ ಬೈಲಪ್ಪ ಅವರನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಹಾಗೂ ಆತನ ಮಗಳು ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿರುವ ಮುದಗಲ್ ಪಿಎಸ್ ಐ ಡಾಕೇಶ್ ಅವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು ಹಾಗೂ ಇಡೀ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ದಲಿತ ಒಕ್ಕೂಟ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳ ಹೋರಾಟ ವೇದಿಕೆ ಮುಖ್ಯಸ್ಥ ಹನಮಂತಪ್ಪ ಕುಣೆಕೆಲ್ಲೂರ ನೇತೃತ್ವದಲ್ಲಿ ಈಶಾನ್ಯ ವಲಯ ಪ್ರಭಾರಿ ಐಜಿಪಿ ಮನಿಷ ಕೊರವೆಕರ್ ಅವರಿಗೆ ಮನವಿ ಸಲ್ಲಿಸಲಾಯಿತು.


ಕಿಲಾರಟ್ಟಿ ಇತರೆ ಗ್ರಾಮಗಳಲ್ಲಿ ದಲಿತರಿಗೆ ಹೋಟೆಲ್ ಹಾಗೂ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮೇಲ್ಜಾತಿಯವರು ದಲಿತರ ಕ್ಷೌರ ಮಾಡುವುದಿಲ್ಲ. ಇಲ್ಲಿ ಆಸ್ಪೃಶ್ಯತೆಯನ್ನು ನಿರಂತರ ನಡೆಯುತ್ತಿದೆ. ದಲಿತರು ಸಾಗುವಳಿ ಮಾಡಿದ ಸರಕಾರಿ ಭೂಮಿಗೆ ಪಟ್ಟಾ ನೀಡುವುದಿಲ್ಲ. ಅಸ್ಪೃಶ್ಯತೆ ಹಾಗೂ ಜಾತಿ ತಾರತಮ್ಯ ಕಿಲಾರಟ್ಟಿ ಸೇರಿದಂತೆ ಜಿಲ್ಲೆಯ ಶೇ. 50ರಷ್ಟು ಗ್ರಾಮಗಳಲ್ಲಿ ಆಚರಣೆಯಲ್ಲಿದೆ. ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸಿ ಕೂಡಲೆ ಅಸ್ಪೃಶ್ಯತೆ ತಡೆಗೆ ಕ್ರಮಕೈಗೊಳ್ಳಬೇಕು. ಕಿಲಾರಟ್ಟಿ ಪ್ರಕರಣಕ್ಕೆ ಕುಮ್ಮಕ್ಕು ನೀಡಿದ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕು ಹಾಗೂ ದಲಿತ ಕುಟಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಒತ್ತಾಯಿಸಲಾಯಿತು.


ದಲಿತ ಜನಪರ ಸಂಘಟನೆಗಳ ಹೋರಾಟ ವೇದಿಕೆಯ ಹನುಮಂತಪ್ಪ ಕುಣಿಕೆಲ್ಲೂರ, ದುರಗಪ್ಪ ಅಗ್ರಹಾರ ರಮೇಶಗೋಸ್ಲೆ, ದುರಗಪ್ಪ ಡಬ್ಬೇರಮಡು, ಖಾಲಿದ ಛಾವೂಸ, ಅನಿಲ್ ಕುಮಾರ, ದುರಗಪ್ಪ ಕೆಸರಟ್ಟಿ ಹೊಳೆಯಪ್ಪ ಶಿವಪ್ಪ ಮಾಚನೂರ ಉಮೇಶ ಅನೇಕರು ಇದ್ದರು.

Join Whatsapp
Exit mobile version