ಲಕ್ನೋ: ಆಝಾದ್ ಸಮಾಜ ಪಕ್ಷ (ಕಾಂಶಿರಾಮ್) ತನ್ನ ಚುನಾವಣಾ ಪ್ರಣಾಳಿಕೆಯನ್ನು ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಬಿಡುಗಡೆಗೊಳಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು 80 ಲಕ್ಷ ಉದ್ಯೋಗ, ಉಚಿತ ಶಿಕ್ಷಣ ಮತ್ತು ಆರೋಗ್ಯ, ರಕ್ಷಣೆ, ಕೃಷಿ ಸಾಲ ಮನ್ನಾ ಮತ್ತು ಗುಂಪು ಹತ್ಯೆ ತಡೆ ಕಾಯ್ದೆ ಸೇರಿದಂತೆ ಹಲವಾರ ಜನಪರ ಅಂಶಗಳು ಇದರಲ್ಲಿ ಅಡಕವಾಗಿವೆ ಎಂದು ಪ್ರಣಾಳಿಕೆ ಬಿಡುಗಡೆ ಬಳಿಕ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಆಝಾದ್ ಸಮಾಜ ಪಕ್ಷ ಅಧಿಕಾರಕ್ಕೇರಿದರೆ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಲಾಗುವುದು ಮತ್ತು 10 ದಿನಗಳಲ್ಲಿ ಕಬ್ಬು ಬೆಳೆಗಾರರಿಗೆ ಪಾವತಿಸುವುದಾಗಿ ಭರವಸೆ ನೀಡಿದರು. ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಟೋಲ್ ಗಳನ್ನು ಪ್ರಯಾಣಿಕರಿಗೆ ಮುಕ್ತಗೊಳಿಸಲಾಗುವುದೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ವಕ್ಫ್ ಮಂಡಳಿಯನ್ನು ಮಾಫಿಯಾ ಮತ್ತು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲಾಗುವುದು. ವಕ್ಫ್ ಆಸ್ತಿಯನ್ನು ಮುಸ್ಲಿಮರ ಉನ್ನತಿಗಾಗಿ ಬಳಸಲಾಗುವುದೆಂದು ಚಂದ್ರಶೇಖರ್ ಆಝಾದ್ ಭರವಸೆ ನೀಡಿದ್ದಾರೆ.
ಮಾತ್ರವಲ್ಲ ವಕ್ಫ್ ಆಸ್ತಿಗಳ ಮೇಲಿನ ಅತಿಕ್ರಮನ ತೆರವುಗೊಳಿಸಿದ ಬಳಿಕ ಅಲ್ಲಿ ಶಾಲೆ ಮತ್ತು ವಿಶ್ವವಿದ್ಯಾಲಯಗಳನ್ನು ನಿರ್ಮಿಸಲಾಗುವುದುದಎ ಎಂದು ಆಝಾದ್ ಸಮಾಜ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನಮೂದಿಸಿದೆ.