Home ಟಾಪ್ ಸುದ್ದಿಗಳು ಅಲ್ಪಸಂಖ್ಯಾತ ವಿರೋಧಿ ಚಿತ್ರಣದಿಂದ ಭಾರತದ ಕಂಪೆನಿಗಳಿಗೆ ಹಾನಿ: ಎಚ್ಚರಿಸಿದ ರಘುರಾಮ್ ರಾಜನ್

ಅಲ್ಪಸಂಖ್ಯಾತ ವಿರೋಧಿ ಚಿತ್ರಣದಿಂದ ಭಾರತದ ಕಂಪೆನಿಗಳಿಗೆ ಹಾನಿ: ಎಚ್ಚರಿಸಿದ ರಘುರಾಮ್ ರಾಜನ್

ನವದೆಹಲಿ: ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ RBI ಮಾಜಿ ಗವರ್ನರ್ ರಘುರಾಮ್ ರಾಜನ್, ದೇಶದಲ್ಲಿರುವ ಅಲ್ಪಸಂಖ್ಯಾತ ವಿರೋಧಿ ಚಿತ್ರಣವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆ ಕಳೆದುಕೊಳ್ಳುವಂತೆ ಮಾಡಲಿದ್ದು, ವಿದೇಶಿ ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬಹುದು ಎಂದು ಎಚ್ಚರಿಸಿದ್ದಾರೆ.

ವಾಯವ್ಯ ದೆಹಲಿ ಜಹಾಂಗೀರ್ ಪುರಿಯಲ್ಲಿ ನಡೆದ ಭೀಕರ ಗಲಭೆಯಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿದಕ್ಕೆ ಉಲ್ಲೇಖೀಸಿ ರಾಜನ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ದೇಶದ ಎಲ್ಲಾ ನಾಗರಿಕರನ್ನು ಗೌರವಯುತವಾಗಿ ಪರಿಗಣಿಸುವುದು ಪ್ರಜಾಪ್ರಭುತ್ವ ಎಂದು ನಾನು ತಿಳಿದಿದ್ದೇನೆ. ಯಾರನ್ನು ಪ್ರೋತ್ಸಾಹಿಸಬೇಕೆಂಬುದರ ಬಗ್ಗೆ ಆಯ್ಕೆಗಳನ್ನು ಮಾಡುವವರು ಕೇವಲ ಗ್ರಾಹಕರು ಮಾತ್ರವಲ್ಲ, ಬದಲಾಗಿ ಅಂತಾರಾಷ್ಟ್ರೀಯ ಸಂಬಂಧಗಳಿಂದಲೂ ನಿರ್ಧರಿಸಲ್ಪಡುತ್ತದೆ, ಏಕೆಂದರೆ ಸರ್ಕಾರಗಳು ಅದು ತನ್ನ ದೇಶದ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುವುದರ ಆಧಾರದಲ್ಲಿ “ವಿಶ್ವಾಸಾರ್ಹ ಪಾಲುದಾರ” ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತಿದೆ ಎಂದು ರಾಜನ್ ತಿಳಿಸಿದ್ದಾರೆ.

ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ ಅಥವಾ ಕೇಂದ್ರೀಯ ತನಿಖಾ ದಳ (ಸಿಬಿಐ) ನಂತಹ ಸಾಂವಿಧಾನಿಕ ಅಧಿಕಾರಗಳನ್ನು ದುರ್ಬಲಗೊಳಿಸುವುದು ನಮ್ಮ ದೇಶದ ಪ್ರಜಾಪ್ರಭುತ್ವದ ಸ್ವರೂಪವನ್ನು ನಾಶಪಡಿಸುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version