Home ಟಾಪ್ ಸುದ್ದಿಗಳು ಟೊಯೊಟಾ ಕಂಪೆನಿಯಿಂದ ಕಾರ್ಮಿಕ ವಿರೋಧಿ ನೀತಿ| 45 ಕಾರ್ಮಿಕರ ವಜಾ!

ಟೊಯೊಟಾ ಕಂಪೆನಿಯಿಂದ ಕಾರ್ಮಿಕ ವಿರೋಧಿ ನೀತಿ| 45 ಕಾರ್ಮಿಕರ ವಜಾ!

 

ರಾಮನಗರ:  ಮುಷ್ಕರ ನಡೆಸಿದರೆಂದು ಆರೋಪಿಸಿ ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ವಲಯದಲ್ಲಿರುವ ಟೊಯೊಟಾ ಕಿರ್ಲೋಸ್ಕರ್ ಕಂಪನಿ ಸುಮಾರು 45 ಕಾರ್ಮಿರನ್ನು ಕೆಲಸದಿಂದ ವಜಾ ಮಾಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಆಡಳಿತ ಮಂಡಳಿಯು ತನ್ನ ನಿರ್ಧಾರವನ್ನು ಸಮರ್ಥಿಸಿದೆ.

‌ಸಾವಿರಾರು‌ ಕಾರ್ಮಿಕರು ಟಿಕೆಎಂ ನೌಕರರ ಸಂಘದ ನೇತೃತ್ವದಲ್ಲಿ ಕೆಲವು‌ ತಿಂಗಳ ಹಿಂದೆ ಕಾರ್ಮಿಕರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮುಷ್ಕರ ನಡೆಸಿದ್ದರು. ಟೊಯೊಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ಕಂಪನಿಯು ನಿಯಮಬಾಹಿರವಾಗಿ ಮುಷ್ಕರ ನಡೆಸಿದ ಆರೋಪದ‌ ಮೇಲೆ 66 ನೌಕರರನ್ನು ಸೇವೆಯಿಂದ ಅಮಾನತು ಮಾಡಿ ಅವರ ವಿರುದ್ಧ ತನಿಖೆಗೆ ಆದೇಶಿಸಿತ್ತು. ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ‌ಕಂಪನಿ‌ 45 ಕಾರ್ಮಿಕರನ್ನು ಸೇವೆಯಿಂದ ವಜಾ‌ ಮಾಡಿರುವುದಾಗಿ ಕಂಪೆನಿ ಸಮರ್ಥಿಸಿಕೊಂಡಿದೆ.

Join Whatsapp
Exit mobile version