Home ಟಾಪ್ ಸುದ್ದಿಗಳು ಧರ್ಮಾಧಾರಿತ ಆಳ್ವಿಕೆ ನಡೆಸುವ ಸಂವಿಧಾನ ವಿರೋಧಿ ಬಿಜೆಪಿಗರು ಮನುವಾದಿಗಳು: ಸಿದ್ದರಾಮಯ್ಯ

ಧರ್ಮಾಧಾರಿತ ಆಳ್ವಿಕೆ ನಡೆಸುವ ಸಂವಿಧಾನ ವಿರೋಧಿ ಬಿಜೆಪಿಗರು ಮನುವಾದಿಗಳು: ಸಿದ್ದರಾಮಯ್ಯ

ಯಾದಗಿರಿ: ‘ಧರ್ಮದ ಆಧಾರದ ಮೇಲೆ ದೇಶ ಒಡೆದು ಆಳುತ್ತಿರುವ ಸಂವಿಧಾನ ವಿರೋಧಿ ಬಿಜೆಪಿ ಮುಖಂಡರನ್ನು ಮನುವಾದಿಗಳೆಂದೇ ನಾನು ಕರೆಯುತ್ತೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.


ಶುಕ್ರವಾರ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಸಂವಿಧಾನ ವಿರೋಧಿಗಳಾದ ಇಂತಹವರಿಂದ ದೇಶಕ್ಕೆ ಗಂಡಾಂತರ ಎದುರಾಗಿದೆ. ಮತದಾರರು ಎಚ್ಚರಗೊಳ್ಳಬೇಕು. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದರ ಮೂಲಕ ರಾಜ್ಯ ಮತ್ತು ದೇಶವನ್ನು ಉಳಿಸಬೇಕು’ ಎಂದು ಮನವಿ ಮಾಡಿದರು.


‘ನನ್ನ ನೇತೃತ್ವದ ಸರ್ಕಾರ ನೀಡಿದ್ದ 165 ಭರವಸೆಗಳಲ್ಲಿ 158ನ್ನು ಈಡೇರಿಸಿದ್ದೇವೆ. ಹೊಸದಾಗಿ 30 ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಆದರೆ ಬಿಜೆಪಿ ನೀಡಿದ್ದ 600 ಭರವಸೆಗಳಲ್ಲಿ ಕೇವಲ 50ನ್ನು ಮಾತ್ರ ಜಾರಿಗೆ ತಂದಿದೆ ಎಂದು ಟೀಕಿಸಿದರು.


ನಾವು ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ. ಪ್ರತಿ ಮನೆಗೆ 200 ಯುನಿಟ್ವರೆಗೆ ವಿದ್ಯುತ್ ಉಚಿತವಾಗಿ ನೀಡುತ್ತೇವೆ. ಪ್ರತಿ ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ ಜಮೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

Join Whatsapp
Exit mobile version