Home ಕ್ರೀಡೆ ವಿಶ್ವ ಕುಸ್ತಿ ಚಾಂಪಿಯನ್ಶಿಪ್: ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಅಂಶು ಮಲಿಕ್

ವಿಶ್ವ ಕುಸ್ತಿ ಚಾಂಪಿಯನ್ಶಿಪ್: ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ಅಂಶು ಮಲಿಕ್

ಓಸ್ಲೊ: ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ಮಹಿಳಾ ಯುವ ಕುಸ್ತಿಪಟುಗಳು ಅಮೋಘ ಸಾಧನೆ ಮೆರೆದಿದ್ದಾರೆ.
ನಾರ್ವೆಯ ಓಸ್ಲೋದಲ್ಲಿ ಗುರುವಾರ ರಾತ್ರಿ ನಡೆದ ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್ನಲ್ಲಿ 20 ವರ್ಷದ ಮಲಿಕ್ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಆ ಮೂಲಕ ವಿಶ್ವ ಚಾಂಪಿಯನ್ ಶಿಪ್ ಕೂಟದಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಹಿರಿಮೆಗೆ ಅಂಶು ಮಲಿಕ್ ಪಾತ್ರರಾಗಿದ್ದಾರೆ.


ಮಹಿಳೆಯರ 57 ಕೆ.ಜಿ. ವಿಭಾಗದ ಫೈನಲ್ನಲ್ಲಿ 20 ವರ್ಷದ ಅಂಶು, ಟೋಕಿಯೋ ಒಲಿಂಪಿಕ್ಸ್ನ ಕಂಚು ವಿಜೇತೆ, ಅಮೆರಿಕದ ಹೆಲೆನ್ ಮರೌಲಿಸ್ ವಿರುದ್ಧ 1-4 ಅಂತರದಲ್ಲಿ ಸೋಲುಂಡರು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅಂಶು, ಫೈನಲ್ನಲ್ಲಿ ಹೆಲೆನ್ಲ ಸವಾಲಿನೆದುರು ಮಂಡಿಯೂರಿದರು.


ಕಂಚಿನ ಪದಕ ಗೆದ್ದ ಸರಿತಾ:

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ನ ಮಹಿಳೆಯರ 59 ಕೆ.ಜಿ. ವಿಭಾಗದಲ್ಲಿ ಸರಿತಾ ಮೊರ್ ಕಂಚಿನ ಪದಕ ಜಯಿಸಿದ್ದಾರೆ.
ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸರಿತಾ, ಸ್ವೀಡನ್ ನ ಸಾರಾ ಲಿಂಡ್ಬೋರ್ಗ್ ವಿರುದ್ಧ 8-2 ಅಂತರದಲ್ಲಿ ಅಮೋಘ ಜಯ ಸಾಧಿಸಿದರು.


ಆ ಮೂಲಕ ವಿಶ್ವ ಕುಸ್ತಿ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕ ಗೆದ್ದ ಆರನೇ ಭಾರತೀಯ ಮಹಿಳಾ ಕುಸ್ತಿಪಟು ಎನಿಸಿದ್ದಾರೆ.
ಈ ಮೊದಲು ಗೀತಾ ಫೋಗಾಟ್(2012), ಬಬಿತಾ ಫೋಗಾಟ್(2012), ಪೂಜಾ ಧಂಡಾ(2018) ಹಾಗೂ ವಿನೇಶ್ ಫೋಗಾಟ್(2019)ರಲ್ಲಿ ಕಂಚಿನ ಪದಕ ಜಯಿಸಿದ್ದರು. ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಇದುವರೆಗೆ ಸುಶೀಲ್ ಕುಮಾರ್(2010) ಮಾತ್ರ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Join Whatsapp
Exit mobile version