Home ಟಾಪ್ ಸುದ್ದಿಗಳು ಕೋಟಾದಲ್ಲಿ ಮತ್ತೋರ್ವ ನೀಟ್ ಆಕಾಂಕ್ಷಿ ಆತ್ಮಹತ್ಯೆ: ವರ್ಷದಲ್ಲಿ 8ನೇ ಘಟನೆ

ಕೋಟಾದಲ್ಲಿ ಮತ್ತೋರ್ವ ನೀಟ್ ಆಕಾಂಕ್ಷಿ ಆತ್ಮಹತ್ಯೆ: ವರ್ಷದಲ್ಲಿ 8ನೇ ಘಟನೆ

ಕೋಟಾ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET) ತಯಾರಿ ನಡೆಸುತ್ತಿದ್ದ ಮತ್ತೋರ್ವ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ರಾಜಸ್ಥಾನದ ಕೋಟಾದಲ್ಲಿ ಈ ಘಟನೆ ನಡೆದಿದೆ. ಮೃತ ಸೌಮ್ಯಾ ಲಕ್ನೋ ನಿವಾಸಿ. ನೀಟ್ ಪರೀಕ್ಷೆಯ ತಯಾರಿಯ ಭಾಗವಾಗಿ ಆಕೆ ಖಾಸಗಿ ಕೋಚಿಂಗ್ ತರಗತಿಗಳಿಗೆ ಹಾಜರಾಗುತ್ತಿದ್ದಳು.


ಇದು ಈ ವರ್ಷ ಎಂಟನೇ ಆತ್ಮಹತ್ಯೆಯಾಗಿದ್ದು, ಎರಡು ದಿನಗಳಲ್ಲಿ ದೇಶದ ಪ್ರಸಿದ್ಧ ಕೋಚಿಂಗ್ ಹಬ್ ನಲ್ಲಿ ನಡೆದ ಎರಡನೇ ಘಟನೆಯಾಗಿದೆ. ಮಾರ್ಚ್ 25 ರಂದು, NEET ಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ಉರುಜ್ ಖಾನ್ (20) ಕೋಟಾದಲ್ಲಿನ ತನ್ನ ಬಾಡಿಗೆ ಕೊಠಡಿಯ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ, ಆತ ಉತ್ತರ ಪ್ರದೇಶದ ಕನೌಜ್ ಮೂಲದವರಾಗಿದ್ದಾರೆ.

Join Whatsapp
Exit mobile version