Home ಟಾಪ್ ಸುದ್ದಿಗಳು ನಿಗಮ ಮಂಡಳಿ ತಿರಸ್ಕರಿಸಿದ ಮತ್ತೋರ್ವ ಶಾಸಕ

ನಿಗಮ ಮಂಡಳಿ ತಿರಸ್ಕರಿಸಿದ ಮತ್ತೋರ್ವ ಶಾಸಕ

ರಾಯಚೂರು: ನಿಗಮ ಮಂಡಳಿ ನೇಮಕ ಬೆನ್ನಲ್ಲೇ ಮತ್ತೋರ್ವ ಶಾಸಕ ಸ್ಥಾನ ತಿರಸ್ಕರಿಸಿದ್ದಾರೆ. ಕರ್ನಾಟಕ ಬೀಜ ನಿಗಮ ಮಂಡಳಿಯ ಅಧ್ಯಕ್ಷಗಿರಿಯನ್ನು ಬಾಗೇಪಲ್ಲಿ ಶಾಸಕ ಎಸ್‌.ಎನ್. ಸುಬ್ಬಾರೆಡ್ಡಿ ತಿರಸ್ಕರಿಸಿದ ಬಳಕ ಇದೀಗ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಪರೋಕ್ಷವಾಗಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದಾರೆ.

ನಾವು ಜಿಲ್ಲೆಯಲ್ಲಿ ನಾಲ್ವರು ಶಾಸಕರಿದ್ದೇವೆ, ಆದರೆ ಯಾರಿಗೂ ಸಚಿವ ಸ್ಥಾನ ಕೊಟ್ಟಿಲ್ಲ. ನಮಗೆ ಮಂತ್ರಿಸ್ಥಾನ ಕೊಡ್ತಾರೋ ಇಲ್ವೋ ತಿಳಿಸಬೇಕು. ನಾನು ಸಿಎಂ ಹಾಗೂ ಡಿಕೆ ಶಿವಕುಮಾರ್ ಜೊತೆ ಈ ಬಗ್ಗೆ ಚರ್ಚೆ ಮಾಡ್ತೇನೆ ಎಂದಿದ್ದಾರೆ.

ಹ್ಯಾಟ್ರಿಕ್ ಗೆಲುವು ಸಾಧಿಸಿದರೂ ಸಚಿವಗಿರಿ ಕೊಟ್ಟಿಲ್ಲ ಎಂದು ನಿನ್ನೆ ಶಾಸಕ ಸುಬ್ಬಾರೆಡ್ಡಿ ಅಸಮಾಧಾನ ಹೊರಹಾಕಿದ್ದರು. ಬೀಜ ನಿಗಮ ಮಂಡಳಿ ಅಧ್ಯಕ್ಷಗಿರಿ ಹುದ್ದೆ ಬೇಡ. ಅದರ ಬದಲು ಜನಪರ ಸೇವೆ ಮಾಡುವ ಹುದ್ದೆ ಬೇಕೆಂದು ಸಿಎಂ, ಡಿಕೆ ಶಿವಕುಮಾರ್​ಗೆ ಫೋನ್ ಮೂಲಕ ಮನವಿ ಮಾಡಿದ್ದರು.

ಅದೇ ಹಾದಿ ಹಿಡಿದ ಹಂಪನಗೌಡ ಬಾದರ್ಲಿ, ಐದು ಬಾರಿ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ, ನನ್ನ ಹಿರಿಯ ತನಕ್ಕೆ ಗೌರವಕೊಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಟ್ಟರೆ ಸಚಿವ ಸ್ಥಾನ ಕೊಡಿ, ಇಲ್ಲ ಎಂದರೇ ನಿಗಮ ಮಂಡಳಿ ಸ್ಥಾನ ಬೇಡ ಎಂಬುದು ಅವರ ನಿಲುವಾಗಿದೆ.

Join Whatsapp
Exit mobile version