ಹೆಲ್ಸಿಂಕಿ : ಭಾರತದ ತಾರಾ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರು ಟೋಕಿಯೋ ಒಲಿಂಪಿಕ್ಸ್ ಬಳಿಕ ಮತ್ತೊಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಪರ ಐತಿಹಾಸಿಕ ಚಿನ್ನ ಗೆದ್ದ ಬಳಿಕ ನೀರಜ್ಗೆ ಇದು 2ನೇ ಚಿನ್ನ. ಇದಕ್ಕೂ ಮೊದಲು ಇದೇ ವಾರದ ಆರಂಭದಲ್ಲಿ ಅವರು ಫಿನ್ಲೆಂಡ್ನ ಪಾವೊ ನುರ್ಮಿ ಗೇಮ್ಸ್ನಲ್ಲಿ 89.30 ದೂರಕ್ಕೆ ಜಾವೆಲಿನ್ ಎಸೆದು ತಮ್ಮದೇ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು.
ಶನಿವಾರ ಫಿನ್ಲೆಂಡ್ನಲ್ಲಿ ನಡೆದ ಕುಒರ್ಟೆನ್ ಗೇಮ್ಸ್ನಲ್ಲಿ ನೀರಜ್ ಅವರು 86.69 ಮೀ. ದೂರಕ್ಕೆ ಜಾವೆಲಿನ್ ಎಸೆದು ಬಂಗಾರ ಗೆದ್ದುಕೊಂಡಿದ್ದಾರೆ. ಮತ್ತು ಜೂನ್ 30ಕ್ಕೆ ಅವರು ಡೈಮಂಡ್ ಲೀಗ್ನ ಸ್ಟೋಕ್ಹೆಲ್ಮ್ ಲೆಗ್ನಲ್ಲಿ ಸ್ಪರ್ಧಿಸಲಿದ್ದಾರೆ.