Home ಟಾಪ್ ಸುದ್ದಿಗಳು ಪಾಕಿಸ್ತಾನದಲ್ಲಿ ಮತ್ತೆ ಭೂಕಂಪ

ಪಾಕಿಸ್ತಾನದಲ್ಲಿ ಮತ್ತೆ ಭೂಕಂಪ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಭೂಕಂಪವು 133 ಕಿ.ಮೀ ಆಳದಲ್ಲಿ ಸಂಭವಿಸಿದೆ ಮತ್ತು ಅದರ ಕೇಂದ್ರಬಿಂದು ಭಾರತದ ಜಮ್ಮು ಮತ್ತು ಕಾಶ್ಮೀರವಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಸೆಂಟರ್ (NSMC) ಹೇಳಿದೆ.

ರಾಜಧಾನಿ ಇಸ್ಲಾಮಾಬಾದ್ ಮತ್ತು ಇತರ ನಗರಗಳಲ್ಲಿ ಭೂಕಂಪನದ ಅನುಭವವಾಗಿದೆ.

ಭೂಕಂಪನ ಸಕ್ರಿಯ ವಲಯದಲ್ಲಿರುವ ಕಾರಣ ಪಾಕಿಸ್ತಾನವು ಆಗಾಗ್ಗೆ ಭೂಕಂಪಗಳನ್ನ ಅನುಭವಿಸುತ್ತದೆ. ಈ ವರ್ಷದ ಆರಂಭದಲ್ಲಿ ದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿತ್ತು.

2005ರಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ 74,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

Join Whatsapp
Exit mobile version