ಹುಬ್ಬಳ್ಳಿ: ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ 40% ಕಮಿಷನ್ ಆರೋಪ ಇದ್ದೇ ಇದೆ. ಇದೀಗ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.
ಸಿವಿಲ್ ಕಾಂಟ್ರಾಕ್ಟರ್ ಸಂಘ 40 % ಆರೋಪ ಮಾಡಿದ್ದರೆ, ಇದೀಗ ಹೆಸ್ಕಾಂ ಗುತ್ತಿಗೆದಾರರಿಂದ ಎಂಡಿ ವಿರುದ್ಧ 25% ಕಮಿಷನ್ ಆರೋಪ ಕೇಳಿಬಂದಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದ ಹೆಸ್ಕಾಂ ಗುತ್ತಿಗೆದಾರರು, 25% ಕಮಿಷನ್ ಪಡೆದು ಹೊರ ರಾಜ್ಯದ ಗುತ್ತಿಗೆದಾರರಿಗೆ 472ಕೋಟಿ ರೂ. ಟೆಂಡರ್ ನೀಡಿದ್ದಾರೆ. ರಾಜ್ಯದ ಗುತ್ತಿಗೆದಾರರಿಗೆ ಟೆಂಡರ್ ನೀಡಿದ್ದರೆ ಸುಮಾರು 3000 ಗುತ್ತಿಗೆದಾರರಿಗೆ ಕಲಸ ಸಿಗುತ್ತಿತ್ತು. ಇದನ್ನೆಲ್ಲ ಬಿಟ್ಟು ಕಮಿಷನ್ ಆಸೆಗೆ ಕೇವಲ 40 ಜನರಿಗೆ ಟೆಂಡರ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮೂಲಕ HESCOM ಎಂಡಿ ಡಿ. ಭಾರತಿ ಮತ್ತು ತಾಂತ್ರಿಕ ನಿರ್ದೇಶಕ ಶ್ರೀಕಾಂತ ಸಸಾಲೊಟ್ಟಿ ವಿರುದ್ದ ಭ್ರಷ್ಟಾಚಾರ ಆರೋಪ ತಲೆ ಎತ್ತಿದೆ.