Home ಟಾಪ್ ಸುದ್ದಿಗಳು ಅಂಕೋಲಾ ಗುಡ್ಡ ಕುಸಿತ: ಮತ್ತೊಂದು ಮೃತದೇಹ ಪತ್ತೆ

ಅಂಕೋಲಾ ಗುಡ್ಡ ಕುಸಿತ: ಮತ್ತೊಂದು ಮೃತದೇಹ ಪತ್ತೆ

ಅಂಕೋಲಾ : ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಇಂದು ಬೆಳಿಗ್ಗೆ ಗಂಗಾವಳಿ ನದಿ ಸಂಗಮದ ಮಂಜುಗುಣಿಯಲ್ಲಿ ಇನ್ನೊಂದು ಮಹಿಳೆಯ‌ ಮೃತದೇಹ ಪತ್ತೆಯಾಗಿದೆ. ಇದರಿಂದ ಒಟ್ಟು ಸಾವಿನ ಸಂಖ್ಯೆ ಇದಿಗ ಎಂಟಕ್ಕೆರಿದೆ.

ಗಂಗಾವಳಿ ನದಿ ತೀರದ ಉಲುವರೆ ಗ್ರಾಮದ ಮಹಿಳೆ ಹನುಮಂತ ಗೌಡ(61) ಎಂಬವರು ನಾಪತ್ತೆ ಆಗಿದ್ದರು. ಇದೀಗ ಪತ್ತೆಯಾಗಿರುವ ಮೃತದೇಹ ಆಕೆಯದ್ದೇ ಎಂದು ಕುಟುಂಬದವರು ಪತ್ತೆ ಮಾಡಬೇಕಿದೆ. ಪತ್ತೆಯಾಗಿರುವ ಮೃತದೇಹದ ಕೈಯಲ್ಲಿ ಬಳೆ ಹಾಗೂ ಬಟ್ಟೆಯ ಬಣ್ಣದ ಮೂಲಕ ಮಹಿಳೆಯನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.

ಹೆದ್ದಾರಿಯಲ್ಲಿ ಇದುವರೆಗೆ ಶೇಕಡ 70ರಷ್ಟು ಮಣ್ಣು ತೆಗೆಯಲಾಗಿದ್ದು, ಇಂದು ಸಂಜೆ ಅಥವಾ ನಾಳೆ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಲಿದೆ. 7 ದಿನದಿಂದ ಹುಡುಕಾಟ ನಡೆಸಿದರೂ ಲಾರಿ ಚಾಲಕ ಅರ್ಜನ್ ಕಂಡುಬಂದಿಲ್ಲ.

Join Whatsapp
Exit mobile version