ನೇಹಾ ಹತ್ಯೆ ಖಂಡಿಸಿ ಅಂಜುಮನ್ ಸಂಸ್ಥೆಯಿಂದ ಪ್ರತಿಭಟನೆ

Prasthutha|

ಧಾರವಾಡ: ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ, ಕೊಲೆಗಾರಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ನಗರದ ಅಂಜುಮನ್ ಸಂಸ್ಥೆಯವರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

- Advertisement -

ನಗರದ ಅಂಜುಮನ್ ಸಂಸ್ಥೆ ಆವರಣದಿಂದ ಮೆರವಣಿಗೆ ಹೊರಟಿತು. ಪ್ರತಿಭಟನಾಕಾರರು ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೆರವಣಿಗೆಯಲ್ಲಿ ಸಾಗಿದರು.


ನಗರದ ಬಿಆರ್ಟಿಎಸ್ ನಿಲ್ದಾಣ ಪ್ರದೇಶ ಸುತ್ತ, ನಗರದ ವಿವಿಧೆಡೆಗಳಲ್ಲಿ ಬಹುತೇಕ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿ, ಮಳಿಗೆಗಳನ್ನು ಬಂದ್ ಮಾಡಿದ್ದಾರೆ.

Join Whatsapp
Exit mobile version