Home ಟಾಪ್ ಸುದ್ದಿಗಳು ಅನಿಲ್ ದೇಶಮುಖ್ ಅಕ್ರಮ ಹಣ ವರ್ಗಾವಣೆಯ “ಮಾಸ್ಟರ್ ಮೈಂಡ್” ಎಂದ ED

ಅನಿಲ್ ದೇಶಮುಖ್ ಅಕ್ರಮ ಹಣ ವರ್ಗಾವಣೆಯ “ಮಾಸ್ಟರ್ ಮೈಂಡ್” ಎಂದ ED

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್  ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದ ‘ಮಾಸ್ಟರ್ ಮೈಂಡ್’ಆಗಿದ್ದು, ತಮ್ಮ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಸಂಪತ್ತು ಗಳಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಬಾಂಬೆ ಹೈಕೋರ್ಟ್ ಗೆ ತಿಳಿಸಿದ್ದು, ಅನಿಲ್ ದೇಶಮುಖ್ ಗೆ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದೆ.

ಅನಿಲ್ ದೇಶಮುಖ್ ಜಾಮೀನಿಗೆ ಇಡಿ ವಿರೋಧ ವ್ಯಕ್ತಪಡಿಸಿದ್ದು, “ಅನಿಲ್ ದೇಶಮುಖ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಆಗಿದ್ದು, ತಮ್ಮ ಸ್ಥಾನವನ್ನು ಸಾಕಷ್ಟು ದುರುಪಯೋಗಪಡಿಸಿಕೊಂಡಿದ್ದಾರೆ. ಜಾಮೀನು ನೀಡಿದರೆ, ಅವರು ಹೊರಗೆ ಹೋಗಿ ಸಾಕ್ಷ್ಯವನ್ನು ನಾಶಪಡಿಸಬಹುದು” ಎಂದು ನ್ಯಾಯಾಲಯಕ್ಕೆ ತಿಳಿಸಿದೆ.

“ಅನಿಲ್ ದೇಶಮುಖ್ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದಾರೆ ಮತ್ತು ಎಲ್ಲಾ ಹಣವನ್ನು ಅವರ ಟ್ರಸ್ಟ್ ನಲ್ಲಿ ಇರಿಸಿದ್ದಾರೆ” ಎಂದು ಇಡಿ  ಆರೋಪಿಸಿದೆ.

ದೇಶಮುಖ್ ಅವರ ಜಾಮೀನು ಅರ್ಜಿಗೆ ಪ್ರತಿಕ್ರಿಯೆಯಾಗಿ ಇಡಿ ಬಾಂಬೆ ಹೈಕೋರ್ಟ್ ನಲ್ಲಿ ಅಫಿದವತ್ ಸಲ್ಲಿಸಿದೆ.

Join Whatsapp
Exit mobile version