ಅಂಗನವಾಡಿ ಕಾರ್ಯಕರ್ತೆ ಬರ್ಬರ ಕೊಲೆ

Prasthutha|

ಮೈಸೂರು ; ಕಬ್ಬಿಣದ ರಾಡ್ ನಿಂದ ಹೊಡೆದು ಅಂಗನವಾಡಿ ಕಾರ್ಯಕರ್ತೆಯನ್ನು ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ತಾಲ್ಲೂಕಿನ ಸಿದ್ದಲಿಂಗಪುರದಲ್ಲಿ ಈ ಘಟನೆ ನಡೆದಿದೆ. ಅಂಗನವಾಡಿ ಕಾರ್ಯಕರ್ತೆ ಮಮತಾ (33)ಕೊಲೆ ಯಾದವರು. ಅವರನ್ನು ಬುಧವಾರ ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿದೆ. ಮಮತಾ ಪಾಂಡವಪುರ ತಾಲ್ಲೂಕಿನ ಕೆರೆತೊಣ್ಣೂರಿನ ಜೆಡಿಎಸ್ ಕಾರ್ಯಕರ್ತ ರಾಮು ಅವರ ಪತ್ನಿ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

- Advertisement -

ಹಾಸನ ಮೂಲದ ಆರೋಪಿ ಮೋಹನ್ ಎಂಬುವವರೊಂದಿಗೆ ಹಣಕಾಸಿನ ವ್ಯವಹಾರದಲ್ಲಿ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.

ಸಿದ್ದಲಿಂಗಪುರದ ಬಳಿ ಬೇಕರಿಯೊಂದನ್ನು ನಡೆಸುತ್ತಿದ್ದ ಅವಿವಾಹಿತ ಆರೋಪಿಗೆ ಮಮತಾ ಹಣಕಾಸಿನ ನೆರವು ನೀಡಿದ್ದರು. ವಾಪಸ್ ಕೊಡುವಂತೆ ಕೇಳಿದ್ದರಿಂದ ಜಗಳ ನಡೆದಿದ್ದು, ಮೋಹನ್ ಕಬ್ಬಿಣದ ರಾಡ್ ನಿಂದ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸ್ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -